Home ಟಾಪ್ ಸುದ್ದಿಗಳು ಸೌದಿ ಅರೇಬಿಯಾದಲ್ಲಿ‌ ಭಾರೀ ಮಳೆ: ಪ್ರವಾಹಕ್ಕೆ ಸಿಲುಕಿ 9 ಮಂದಿ ಮೃತ್ಯು

ಸೌದಿ ಅರೇಬಿಯಾದಲ್ಲಿ‌ ಭಾರೀ ಮಳೆ: ಪ್ರವಾಹಕ್ಕೆ ಸಿಲುಕಿ 9 ಮಂದಿ ಮೃತ್ಯು

????? ??? ????? ???? (???) ??-??-???? ??

ಜೆದ್ದಾ: ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹಕ್ಕೆ ಸಿಲುಕಿ 9 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನೈಋತ್ಯ ಪ್ರದೇಶದ ಜೀಝಾನ್ ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರವಾಹದಲ್ಲಿ ಮುಳುಗಿದ ಮೂವರ ಶವಗಳನ್ನು ಸಿವಿಲ್ ಡಿಫೆನ್ಸ್ ಪತ್ತೆಹಚ್ಚಿತ್ತು. ಜೊತೆಗೆ ಇಬ್ಬರು ಮಕ್ಕಳು ಮತ್ತು 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಜಸ್ಸಾನ್ ನ ಸಬಿಯಾ ಮತ್ತು ಅಬು ಅರಿಶ್ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಭಾಗಶಃ ಕುಸಿದ ಪರಿಣಾಮ ದಂಪತಿ ಸಾವನ್ನಪ್ಪಿದ್ದರು. ಇದಲ್ಲದೇ ಹಲವು ಸಾವುನೋವುಗಳು ವರದಿಯಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Join Whatsapp
Exit mobile version