Home ಟಾಪ್ ಸುದ್ದಿಗಳು ‘ಕಾಶ್ಮೀರ ಫೈಲ್ಸ್’ ಸಿನಿಮಾ ಅರ್ಧ ಸತ್ಯವನ್ನಷ್ಟೇ ತೋರಿಸಿದೆ: ಛತ್ತೀಸ್ ಗಢ ಮುಖಮಂತ್ರಿ

‘ಕಾಶ್ಮೀರ ಫೈಲ್ಸ್’ ಸಿನಿಮಾ ಅರ್ಧ ಸತ್ಯವನ್ನಷ್ಟೇ ತೋರಿಸಿದೆ: ಛತ್ತೀಸ್ ಗಢ ಮುಖಮಂತ್ರಿ

ನವದೆಹಲಿ: 1990 ರ ದಶಕದಲ್ಲಿ ಕಾಶ್ಮೀರ ಪಂಡಿತರ ವಲಸೆಯನ್ನು ಆಧರಿಸಿ ನಿರ್ಮಿಸಲ್ಪಟ್ಟ ವಿವಾದಾತ್ಮಕ ‘ದಿ ಕಾಶ್ಮೀರ ಫೈಲ್ಸ್’ ಎಂಬ ಹಿಂದಿ ಸಿನಿಮಾವು ಅರ್ಧ ಸತ್ಯವನ್ನಷ್ಟೇ ತೋರಿಸಿದೆ ಮತ್ತು ವೀಕ್ಷಕರಿಗೆ ಯಾವುದೇ ಸಂದೇಶವನ್ನು ರವಾನಿಸದೆ ಹಿಂಸೆಯನ್ನು ಮಾತ್ರ ಬಿಂಬಿಸಿದೆ ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಆರೋಪಿಸಿದ್ದಾರೆ.

ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಇತರ ಶಾಸಕರೊಂದಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಚಿತ್ರವು ಅರ್ಧ ಸತ್ಯವನ್ನು ತೋರಿಸಿದೆ. ಇದರಲ್ಲಿ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ದಿಕ್ಕಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಈ ಸಿನಿಮಾದಲ್ಲಿ ವೀಕ್ಷಕರಿಗೆ ಯಾವುದೇ ಸಂದೇಶ ನೀಡಿಲ್ಲ ಮತ್ತು ವಿನಾಕಾರಣ ಅರ್ಥವಿಲ್ಲದ ಹಿಂಸೆಯನ್ನು ಪ್ರಚೋದಿಸಿದೆ ಎಂದು ಬಾಘೆಲ್ ತಿಳಿಸಿದ್ದಾರೆ.

ಭಯೋತ್ಪಾದನೆ ಘಟನೆಗಳನ್ನು ಆಧರಿಸಿದ ಈ ಸಿನಿಮಾವು, ಕೇವಲ ರಾಜಕೀಯ ಸಂದೇಶ ನೀಡುವ ಪ್ರಯತ್ನ ನಡೆಸಿದ್ದು, ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿದ್ದ ವಿಪಿ ಸಿಂಗ್ ಸರ್ಕಾರ ಕಾಶ್ಮೀರಿ ಪಂಡಿತರನ್ನು ಕಾಶ್ಮೀರವನ್ನು ತೊರೆಯುವಂತೆ ಪ್ರೇರೆಪಿಸಿರುವುದು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ತಿಳಿಸಿದ್ದಾರೆ.

Join Whatsapp
Exit mobile version