Home ಟಾಪ್ ಸುದ್ದಿಗಳು ಶೀಘ್ರದಲ್ಲೇ ಬಹುದೊಡ್ಡ ಮಹತ್ವದ ನಿರ್ಧಾರ ಪ್ರಕಟಿಸಲಿದ್ದೇನೆ: ಪಂಜಾಬ್ ಮುಖ್ಯಮಂತ್ರಿ ಭಗವಂತ್

ಶೀಘ್ರದಲ್ಲೇ ಬಹುದೊಡ್ಡ ಮಹತ್ವದ ನಿರ್ಧಾರ ಪ್ರಕಟಿಸಲಿದ್ದೇನೆ: ಪಂಜಾಬ್ ಮುಖ್ಯಮಂತ್ರಿ ಭಗವಂತ್

ಪಂಜಾಬ್ ಇತಿಹಾಸದಲ್ಲಿಯೇ ಯಾರು ಮಾಡದ ಘೋಷಣೆಯನ್ನು ಮಾಡುತ್ತೇನೆ ಎಂದ ಮಾನ್!

ಪಂಜಾಬ್: ಬುಧವಾರ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಭಗವಂತ್ ಸಿಂಘ್ ಮಾನ್ ಶೀಘ್ರದಲ್ಲೇ ಬಹುದೊಡ್ಡ ಮಹತ್ವದ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮಾನ್ ಅತೀ ಶೀಘ್ರದಲ್ಲಿ ಮಹತ್ವದ ನಿರ್ಧಾರ ಘೋಷಿಸಲಿದ್ದು, ಪಂಜಾಬ್ ಇತಿಹಾಸದಲ್ಲಿಯೇ ಯಾರು ಮಾಡದ ಘೋಷಣೆಯನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಭಗವಂತ್ ಸಿಂಘ್ ಮಾನ್ ಅವರು ನಿನ್ನೆ (ಮಾ.16) ಪಂಜಾಬ್ನ ಖಟ್ಕರ್ ಕಲಾನ್ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ನಾನು ಕ್ಷುಲ್ಲಕ ರಾಜಕಾರಣ ಮಾಡುವುದಿಲ್ಲ, ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಭಾಷಣದಲ್ಲಿ ತಿಳಿಸಿದ್ದರು. ಇದೀಗ ಮುಖ್ಯಮಂತ್ರಿಯ ಹೊಸ ಘೋಷಣೆಯು ಕುತೂಹಲ ಮೂಡಿಸಿದೆ.

Join Whatsapp
Exit mobile version