ಹೊಸದಿಲ್ಲಿ: ಕಾಶ್ಮೀರಿ ವ್ಯಕ್ತಿಯೋರ್ವನಿಗೆ ದಿಲ್ಲಿಯ ಹೋಟೆಲ್ ನಲ್ಲಿ ಕೊಠಡಿ ನಿರಾಕರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಶ್ಮೀರದ ವ್ಯಕ್ತಿಯೊಬ್ಬರು, ಆಧಾರ ಕಾರ್ಡ್, ಪಾಸ್ ಪೋರ್ಟ್ ಸೇರಿದಂತೆ ತನ್ನ ಗುರುತಿನ ಪುರಾವೆಗಳನ್ನು ತೋರಿಸಿದ್ದರೂ ಹೋಟೆಲ್ ನ ಸಿಬ್ಬಂದಿ ಕೊಠಡಿಯನ್ನು ನೀಡಲು ನಿರಾಕರಿಸುತ್ತಿರುವುದು ವೀಡಿಯೋದಲ್ಲಿದೆ.
ಕಾಶ್ಮೀರಿ ವ್ಯಕ್ತಿಯ ಸಂಭಾಷಣೆಯ ವೀಡಿಯೋವನ್ನು ಪೋಸ್ಟ್ ಮಾಡಿರುವ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖ್ವೆಹಾಮಿ, ಇದು ‘ದಿ ಕಾಶ್ಮೀರ ಫೈಲ್ಸ್’ನ ಪ್ರಭಾವವಾಗಿದೆ ಎಂದು ಬಣ್ಣಿಸಿದ್ದಾರೆ. ಕಾಶ್ಮೀರಿಯಾಗಿರುವುದು ಅಪರಾಧವೇ ಎಂದು ಅವರು ಪ್ರಶ್ನಿಸಿದ್ದಾರೆ.