Home ಟಾಪ್ ಸುದ್ದಿಗಳು ದೇವಾಲಯದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ; ದ್ವೇಷ ರಾಜಕಾರಣಕ್ಕೆ ಜಾಗವಿಲ್ಲ: ಸಿದ್ದರಾಮಯ್ಯ ಆಕ್ರೋಶ

ದೇವಾಲಯದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ; ದ್ವೇಷ ರಾಜಕಾರಣಕ್ಕೆ ಜಾಗವಿಲ್ಲ: ಸಿದ್ದರಾಮಯ್ಯ ಆಕ್ರೋಶ

ಮೈಸೂರು: ರಾಜ್ಯದ ಹಲವು ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಿಷೇಧ ಹೇರಿರುವುದನ್ನು ವಿರೋಧಿಸಿ ಸರ್ಕಾರದ ತಮ್ಮ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ದ್ವೇಷ ರಾಜಕಾರಣಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.

ಸೌಹಾರ್ದ ರಾಜಕಾರಣಕ್ಕೆ ಮುಕ್ತ ಅವಕಾಶ ನೀಡುವಂತಾಗಬೇಕೆಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆಡಳಿತಾರೂಢ ಬಿಜೆಪಿ ಪಕ್ಷವು ಕೇವಲ ವೋಟಿಗಾಗಿ ಧ್ರುವೀಕರಣ ಮಾಡುತ್ತಿದೆ. ಹಿಜಾಬ್ ಮತ್ತು ಚರ್ಚ್ ಗಳ ಮೇಲಿನ ದಾಳಿಯು ಮತ ಧ್ರುವೀಕರಣದ ಒಂದು ಭಾಗವೆಂದು ಅವರು ತಿಳಿಸಿದ್ದಾರೆ.

Join Whatsapp
Exit mobile version