ನೆಹರೂ ಕಾಲದಲ್ಲಿ ಇದ್ದಂತೆ ಈಗ ಕಾಂಗ್ರೆಸ್ ಇಲ್ಲ ಎಂದು NCP ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ದೆಹಲಿ ವಿಧಾನಸಭಾ ಸ್ಪೀಕರ್

Prasthutha|

ದೆಹಲಿ : ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಇಂದು (ಎನ್ ಸಿಪಿ) ಸೇರಿದ ಮಾಜಿ ಕಾಂಗ್ರೆಸ್ ನಾಯಕ ಯೋಗಾನಂದ್ ಶಾಸ್ತ್ರಿ ಅವರು,ಕಾಂಗ್ರೆಸ್ ಪಕ್ಷ ಜವಾಹರಲಾಲ್ ನೆಹರು ಅವರ ಕಾಲದಲ್ಲಿ ದ್ದಂತೆ ಇಲ್ಲ , ಅದು ಬದಲಾಗಿರುವುದರಿಂದ ಭವ್ಯ ಹಳೆಯ ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿದರು.

- Advertisement -

“ನಾವು ನಮ್ಮ ಸಂಸ್ಕೃತಿಯನ್ನು ನಂಬುತ್ತೇವೆ, ಒಬ್ಬ ವ್ಯಕ್ತಿಯು ಕೆಲಸ ಮಾಡುತ್ತಲೇ ಇರಬೇಕು ಮತ್ತು ನಾನು ನನ್ನನ್ನು ಖಾಲಿ ಇಡಲಿಲ್ಲ. ಪಕ್ಷವು ನನಗೆ ಸಾಕಷ್ಟು ಕೆಲಸ ನೀಡಲಿಲ್ಲ, ಅದಕ್ಕಾಗಿಯೇ ನಾನು ಎನ್ ಸಿಪಿ ಗೆ ಸೇರಿಕೊಂಡೆ” ಎಂದು ದೆಹಲಿ ಮಾಜಿ ವಿಧಾನಸಭಾ ಸ್ಪೀಕರ್ ಯೋಗಾನಂದ್ ಶಾಸ್ತ್ರಿ ತಿಳಿಸಿದರು.

ಕೊಡುಗೆ ನೀಡಲು ಬಯಸುವವರಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದಿಲ್ಲ” ಎಂದು ಅವರು ಹೇಳಿದರು. “ನಾನು ಉನ್ನತ ನಾಯಕತ್ವವನ್ನು ದೂಷಿಸುವುದಿಲ್ಲ ಆದರೆ ನೆಲಮಟ್ಟದ ವಾಸ್ತವ ನಿಮಗೆ ತಿಳಿದಿದೆ. ಉನ್ನತ ನಾಯಕತ್ವ ತಪ್ಪಿಲ್ಲ ಆದರೆ ಸ್ಥಳೀಯ ಮಟ್ಟದಲ್ಲಿ ಪಕ್ಷ ಉತ್ತಮವಾಗಿಲ್ಲ ಮತ್ತು ಜನರಿಗೆ ಗೌರವ ನೀಡಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ

Join Whatsapp
Exit mobile version