Home ಟಾಪ್ ಸುದ್ದಿಗಳು ಬೆಂಗಳೂರಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ ? ಬಿಬಿಎಂಪಿ ಸಿದ್ಧಪಡಿಸಿದೆ ಒಟ್ಟು ಲೆಕ್ಕ!

ಬೆಂಗಳೂರಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ ? ಬಿಬಿಎಂಪಿ ಸಿದ್ಧಪಡಿಸಿದೆ ಒಟ್ಟು ಲೆಕ್ಕ!

ಬೆಂಗಳೂರು: ಕೋವಿಡ್ ಸೋಂಕಿಗೆ ಬೆಂಗಳೂರಿನಲ್ಲಿ ಮೃತರಾದವರ ಒಟ್ಟು ಲೆಕ್ಕವನ್ನು ಬಿಬಿಎಂಪಿ ಸಿದ್ಧ ಮಾಡಿದೆ. ದೇಶದಲ್ಲಿ ಮೊದಲ ಮತ್ತು ಎರಡನೇ ಲಾಕ್ ಡೌನ್ ಅಲೆಯಲ್ಲಿ ಈವರೆಗೂ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಡೆತ್ ಆಡಿಟ್ ವರದಿಯನ್ನು ಬಿಬಿಎಂಪಿ ತಯಾರಿಸಿದೆ.


ಕೊರೋನಾಗೆ ಬಲಿಯಾದವರ ಸಂಖ್ಯೆ ನಿಜಕ್ಕೂ ಬೆಚ್ಚಿಬೀಳಿಸಿದ್ದು ಒಟ್ಟು 16,307 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆಯ ಅವಧಿಯಲ್ಲಿ ಸಾವಿಗೀಡಾಗಿರುವ ಸಂಖ್ಯೆ ಹೆಚ್ಚಾಗಿದ್ದು 11,827 ಮಂದಿ ಬಲಿಯಾಗಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಾಗಿ ಕೊರೋನಾಗೆ ಬಲಿಯಾಗಿರುವುದಾಗಿ ವರದಿಯು ತಿಳಿಸಿದೆ.


ಕೋವಿಡ್ ಮೊದಲನೆ ಅಲೆಯ ವೇಳೆ 4,480 ಮಂದಿ ಬಲಿಯಾಗಿದ್ದು, ಎರಡನೇ ಅಲೆಯಲ್ಲಿ ಕೊರೋನಾಗೆ 16,307 ಬಲಿಯಾಗಿದ್ದಾರೆ. ಈ ಪೈಕಿ 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಕೋವಿಡ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.


ಕೋವಿಡ್ ನಿಂದ ಸಾವಿಗೀಡಾಗಲು ಜನರ ನಿರ್ಲಕ್ಷ್ಯ ಮತ್ತು ಸೋಂಕಿನ ಗುಣ ಲಕ್ಷಣಗಳು ಕಾಣಿಸಿಕೊಂಡರೂ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯದೇ ಮನೆಯಲ್ಲಿ ಉಳಿದದ್ದು ಎಂದು ಪಾಲಿಕೆ ವರದಿಯಲ್ಲಿ ಉಲ್ಲೇಖಿಸಿದೆ, ಆದರೆ ಕೋವಿಡ್ ಅಲೆಯು ತೀವ್ರತೆ ಹೊಂದಿದ್ದ ಸಂದರ್ಭದಲ್ಲಿ ರಾಜ್ಯ ಸರಕಾರ ಮತ್ತು ಬಿಬಿಎಂಪಿ ಸೋಂಕಿತರಿಗೆ ತ್ವರಿತ ರೀತಿಯಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ವಿಫಲವಾಗಿತ್ತು. ಆಕ್ಸಿಜನ್, ಬೆಡ್ ಇನ್ನಿತರ ಸೂಕ್ತ ವ್ಯವಸ್ಥೆಗಳು ಕ್ಲಿಪ್ತ ಸಮಯಕ್ಕೆ ಸಿಗದ ಹಿನ್ನೆಲೆಯಲ್ಲಿ ಹಲವಾರು ಸೋಂಕಿತರು ಕೋವಿಡ್ ಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Join Whatsapp
Exit mobile version