Home ಟಾಪ್ ಸುದ್ದಿಗಳು ಬದಲಾಗುತ್ತಿರುವ ಆರೋಗ್ಯ ಕ್ಷೇತ್ರ: ನ. 26 ರಂದು ಅತ್ಯಾಧುನಿಕ ಡಿಜಿಟಲ್ ಆರೋಗ್ಯ ಆರೈಕೆ ವಿಚಾರ ಸಂಕಿರಣ

ಬದಲಾಗುತ್ತಿರುವ ಆರೋಗ್ಯ ಕ್ಷೇತ್ರ: ನ. 26 ರಂದು ಅತ್ಯಾಧುನಿಕ ಡಿಜಿಟಲ್ ಆರೋಗ್ಯ ಆರೈಕೆ ವಿಚಾರ ಸಂಕಿರಣ

ಬೆಂಗಳೂರು; ಬದಲಾಗುತ್ತಿರುವ ಆಧುನಿಕ ಸವಾಲುಗಳಿಗೆ ತಕ್ಕಂತೆ ಆರೋಗ್ಯ ವಲಯವನ್ನು ಡಿಜಿಟಲೀಕರಣದತ್ತ ವೇಗವಾಗಿ ಕೊಂಡೊಯ್ಯಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ನ. 26 ರಂದು ಡಿಜಿಟಲ್ ಆರೋಗ್ಯ ಕುರಿತು ಇನ್ಸ್’ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್ ಮೆಂಟ್ [ಐಐಎಚ್ಎಂಆರ್] ನಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಐಎಚ್ಎಂಆರ್ ನ ನಿರ್ದೇಶಕರಾದ ಡಾ. ಉಷಾ ಮಂಜುನಾಥ್, ಅತ್ಯಾಧುನಿಕ ಡಿಜಿಟಲ್ ಆರೋಗ್ಯ ಆರೈಕೆ, ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆ ಕುರಿತು ಬೆಂಗಳೂರಿನ ಹೊಟೇಲ್ ಚಾನ್ಸರಿ ಪೆವಿಲಿಯನ್ ನಲ್ಲಿ ಇನ್ಸ್’ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್’ಮೆಂಟ್ [ಐಐಎಚ್ಎಂಆರ್] ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳ ತಜ್ಞರು ಬೆಳಕು ಚೆಲ್ಲಲಿದ್ದಾರೆ ಎಂದರು.

ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲ್ ವ್ಯವಸ್ಥೆಯನ್ನಾಗಿ ರೂಪಿಸುವ ಹಾಗೂ ಆರೋಗ್ಯ ಕ್ಷೇತ್ರವನ್ನು ಡಿಜಿಟಲ್ ತಾಂತ್ರಿಕತೆಗೆ ಪರಿವರ್ತಿಸುವ ಕುರಿತ ಸವಾಲುಗಳು, ತಂತ್ರಜ್ಞಾನ ಅಳವಡಿಕೆ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಆರೋಗ್ಯ ವಲಯ ಆಕರ್ಷಣೀಯವಾಗಿ ಬದಲಾಗುತ್ತಿದ್ದು, ಸ್ಮಾರ್ಟ್ ತಂತ್ರಜ್ಞಾನ ಆವರಿಸಿಕೊಳ್ಳುತ್ತಿದೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಆರೋಗ್ಯ ವಲಯದಲ್ಲಿ ಪಾಲುದಾರರಿಗೆ ಹೊಸ ಉತ್ಪನ್ನಗಳು, ಸೇವೆಗಳನ್ನು ಒದಗಿಸಲು ಹಾಗೂ ಇತ್ತೀಚಿನ ಪ್ರವೃತ್ತಿಗಳು, ತಂತ್ರಜ್ಞಾನ ಮತ್ತು ಪ್ರಗತಿ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದರು.

ವಿಚಾರಗೋಷ್ಠಿಯಲ್ಲಿ ಬೆಂಗಳೂರು ಐಐಟಿ ಮಾಜಿ ನಿರ್ದೇಶಕ ಹಾಗೂ ಐಐಎಚ್’ಎಂಆರ್’ನ ಪ್ರಾಧ್ಯಾಪಕರಾದ ಡಾ. ಎಸ್. ಸಡಗೋಪನ್, ಇಎಸ್’ಐಸಿಯ ಮಾಜಿ ಮಹಾ ಪ್ರಧಾನ ನಿರ್ದೇಶಕ ಡಾ. ಸಿ.ಎಸ್. ಕೇದಾರ್ [ನಿ.ಐಎಎಸ್], ಆರೋಗ್ಯ ಕೈಗಾರಿಕಾ ವಲಯದ ಪ್ರಮುಖ ವೃತ್ತಿಪರರಾದ ಡಾ. ಎಸ್.ಡಿ. ಗುಪ್ತಾ ಮತ್ತಿತರರು ಡಿಜಿಟಲ್ ಆರೋಗ್ಯ ಕ್ಷೇತ್ರದ ಬಗ್ಗೆ ಮಾತನಾಡಲಿದ್ದಾರೆ ಎಂದು ಡಾ. ಉಷಾ ಮಂಜುನಾಥ್ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ 9972178143 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

Join Whatsapp
Exit mobile version