Home ಟಾಪ್ ಸುದ್ದಿಗಳು ನೂತನ ಸಂಸತ್‌ ಭವನದ ರಕ್ಷಣೆಯ ಹೊಣೆ ಇಂದಿನಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ

ನೂತನ ಸಂಸತ್‌ ಭವನದ ರಕ್ಷಣೆಯ ಹೊಣೆ ಇಂದಿನಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ

ನವದೆಹಲಿ: ನೂತನ ಸಂಸತ್‌ ಭವನದ ರಕ್ಷಣೆಯ ಹೊಣೆಯನ್ನು ಇಂದಿನಿಂದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (CRPF) ಬದಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ವಹಿಸಿಕೊಳ್ಳಲಿದೆ.

ಕಳೆದ ವರ್ಷ ಸಂಸತ್‌ನಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಿಐಎಸ್‌ಎಫ್‌ ಸಿಬ್ಬಂದಿಯ ಭದ್ರತೆಗೆ ವಹಿಸಿದೆ. ಇಂದಿನಿಂದಲೇ ಸಿಐಎಸ್‌ಎಫ್‌ ಸಿಬ್ಬಂದಿಯೇ ಸಂಸತ್‌ನ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. 2013ರಿಂದಲೂ ಸಿಆರ್‌ಪಿಎಫ್‌ ಪಡೆಗಳು ಸಂಸತ್‌ಗೆ ಭದ್ರತೆ ಒದಗಿಸಿದ್ದವು. ಸಿಆರ್‌ಪಿಎಫ್‌ನ ಪಿಡಿಜಿ (ಪಾರ್ಲಿಮೆಂಟ್‌ ಡ್ಯೂಟಿ ಗ್ರೂಪ್‌) ವಾಹನಗಳು, ಶಸ್ತ್ರಾಸ್ತ್ರ, ಸಿಬ್ಬಂದಿಯನ್ನು ಸೋಮವಾರ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version