Home ಟಾಪ್ ಸುದ್ದಿಗಳು ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣರ ಪಾಸ್‌ಪೋರ್ಟ್‌ ತಕ್ಷಣ ರದ್ದುಗೊಳಿಸಲು ಕೋರಿ ಎಸ್‌ಐಟಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.

ಪ್ರಜ್ವಲ್ ರೇವಣ್ಣ ಹೊರಡಿಸಿರುವ ಬ್ಲೂ ಕಾರ್ನರ್ ನೋಟಿಸ್ ಮತ್ತು ಬಂಧನದ ವಾರೆಂಟ್ ಉಲ್ಲೇಖ ಮಾಡಿ ಎಸ್‌ಐಟಿ ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ಬರೆದಿದೆ. ತಕ್ಷಣ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕು ಎಂದು ಮನವಿ ಮಾಡಿದೆ.

ಎಸ್‌ಐಟಿ ತನಿಖೆಗೆ ನೋಟಿಸ್ ನೀಡಿದರೂ ಸಹ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ವಿದೇಶದಲ್ಲಿರುವ ಅವರನ್ನು ದೇಶಕ್ಕೆ ಕರೆಸಲು ಎಸ್‌ಐಟಿ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪ್ರಜ್ವಲ್ ರೇವಣ್ಣಗೆ ಸೇರಿದ ಬ್ಯಾಂಕ್ ಖಾತೆಗಳ ವಹಿವಾಟು ಸ್ಥಗಿತಗೊಳಿಸುವುದು. ಅವರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಈ ಕ್ರಮಗಳಲ್ಲಿ ಸೇರಿದೆ. ಪಾಸ್‌ಪೋರ್ಟ್ ಅನ್ನು ವಿದೇಶಾಂಗ ಸಚಿವಾಲಯ ರದ್ದುಗೊಳಸಬೇಕಾದ ಕಾರಣ ಎಸ್‌ಐಟಿ ಈಗ ಪತ್ರವನ್ನು ಬರೆದಿದೆ.

Join Whatsapp
Exit mobile version