Home ಟಾಪ್ ಸುದ್ದಿಗಳು ಕಾಂಪೌಂಡ್ ಒಳಗಡೆ ನುಗ್ಗಿದ ಕಾರು : ಅಪಾಯದಿಂದ ಚಾಲಕ ಪಾರು

ಕಾಂಪೌಂಡ್ ಒಳಗಡೆ ನುಗ್ಗಿದ ಕಾರು : ಅಪಾಯದಿಂದ ಚಾಲಕ ಪಾರು

ಬೆಂಗಳೂರು: ಅತಿ ವೇಗವಾಗಿ ಬಂದ ಕಾರೊಂದು ಕಾಂಪೌಂಡ್‍ಗೆ ಡಿಕ್ಕಿ ಹೊಡೆದು ಒಳಗೆ ನುಗ್ಗಿದ ಘಟನೆ ರಾಜಧಾನಿ ಬೆಂಗಳೂರಿನ ರಾಜ್‍ಭವನ ರಸ್ತೆಯಲ್ಲಿ ನಡೆದಿದೆ.

ನಸುಕಿನ ಜಾವ ಸುಮಾರು 3 ಗಂಟೆ ವೇಳೆಗೆ ಕಾರೊಂದು ರಾಜ್‍ಭವನ ರಸ್ತೆಯಲ್ಲಿರುವ ಪ್ರಸಾರ ಭಾರತಿ ಗೋಡೆಗೆ ಡಿಕ್ಕಿ ಹೊಡೆದಿದ್ದು ಚಾಲಕ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಿರುವಿನಲ್ಲಿ ಕಾಂಪೌಂಡ್ ಒಳಗಡೆ ನುಗ್ಗಿಸಿದ್ದಾನೆ ಎಂದು ತಿಳಿದು ಬಂದಿದ್ದು ಘಟನೆಯಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ

Join Whatsapp
Exit mobile version