Home ಟಾಪ್ ಸುದ್ದಿಗಳು RSS ವಿರುದ್ಧದ ಟೀಕೆಗೆ ಪ್ರತ್ಯುತ್ತರ ಬೇಡ : ಬಿಜೆಪಿ ನಾಯಕರಿಗೆ ವರಿಷ್ಠರ ವಾರ್ನಿಂಗ್

RSS ವಿರುದ್ಧದ ಟೀಕೆಗೆ ಪ್ರತ್ಯುತ್ತರ ಬೇಡ : ಬಿಜೆಪಿ ನಾಯಕರಿಗೆ ವರಿಷ್ಠರ ವಾರ್ನಿಂಗ್

ಬೆಂಗಳೂರು: ಪ್ರಧಾನಿ ಮೋದಿಯ ಸದೃಢ ಭಾರತ ನಿರ್ಮಾಣದ ಆಶಯಕ್ಕೆ ವಿರುದ್ಧದ ನಡೆ ಬೇಡವೆಂದು ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಮುಖಂಡೆ ನೂಪುರ್ ಶರ್ಮಾ ಹೇಳಿಕೆಯಿಂದ ಉಂಟಾದ ಹಾನಿಯಿನ್ನು ತಪ್ಪಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಆದ್ದರಿಂದ ಮುಂದೆ ಬಿಜೆಪಿ ವಕ್ತಾರರಿಂದ ಪಕ್ಷಕ್ಕೆ ಯಾವುದೇ ಹಾನಿ ಉಂಟಾಗದಂತೆ ದೆಹಲಿ ನಾಯಕರು ಗಮನ ಹರಿಸುತ್ತಿದ್ದು ಪಕ್ಷ ಆಡಳಿತದಲ್ಲಿರುವ ರಾಜ್ಯಕ್ಕೆ ಕೇಂದ್ರ ಹೆಚ್ಚಿನ ನಿರ್ದೇಶ ನೀಡಿದೆ.

ಯಾವುದೇ ಧರ್ಮ,ಧಾರ್ಮಿಕ ನಾಯಕರು ಅಥವಾ ಸಂಕೇತಗಳ ಬಗ್ಗೆ ಅನುಚಿತ ಮತ್ತು ಅತಿರೇಕದ ಹೇಳಿಕೆ ನೀಡಬಾರದು ಮತ್ತು RSS ವಿರುದ್ಧದ ಟೀಕೆಗೆ ಪ್ರತಿಕ್ರಯಿಸಬಾರದು ಎಂದು ಕೇಂದ್ರ ಎಚ್ಚರಿಕೆ ನೀಡಿದೆ‌. ಮತ್ತು ಮಾಧ್ಯಮ ವಿಭಾಗಕ್ಕೆ ತರಬೇತುದಾರರಾದ ಸೂಕ್ತ ವ್ಯಕ್ತಿಗಳನ್ನಷ್ಟೇ ಆಯ್ಕೆ ಮಾಡಬೇಕೆಂದು ರಾಜ್ಯ ನಾಯಕರಿಕೆ ದೆಹಲಿ ವಕ್ತಾರರು ಸೂಚಿಸಿದ್ದಾರೆ

Join Whatsapp
Exit mobile version