ಇಬ್ಬರ ಸಾವಿಗೆ ಕಾರಣನಾದ ಉದ್ಯಮಿ ಪುತ್ರ, ಅಪ್ರಾಪ್ತ ಬಾಲಕನ ಜಾಮೀನು ರದ್ದು

Prasthutha|

ಪುಣೆ: ಮದ್ಯದ ಅಮಲಿನಲ್ಲಿ ಐಷಾರಾಮಿ ಪೋರ್ಷೆ ಕಾರು ಚಲಾಯಿಸಿ ಬೈಕ್​ಗೆ ಡಿಕ್ಕಿ ಹೊಡೆದು ಐಟಿ ಉದ್ಯೋಗಿಗಳಿಬ್ಬರ ಸಾವಿಗೆ ಕಾರಣವಾದ ಉದ್ಯಮಿ ಪುತ್ರ, ಅಪ್ರಾಪ್ತ ಬಾಲಕನಿಗೆ ನೀಡಲಾದ ಜಾಮೀನು ರದ್ದಾಗಿದೆ‌.

- Advertisement -

ಬಾಲಕನಿಂದಾಗಿ ಮಧ್ಯಪ್ರದೇಶ ಮೂಲದ ಅನೀಶ್ ಮತ್ತು ಅಶ್ವಿನಿ ಕೋಸ್ಟಾ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಬಾಲಾಪರಾಧಿಗೆ 14 ಗಂಟೆಯೊಳಗಡೆ ಜಾಮೀನು ನೀಡಿಲಾಗಿತ್ತು. ಇದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಆ ಜಾಮೀನನ್ನು ಪುಣೆಯ ಬಾಲಾಪರಾಧ ನ್ಯಾಯ ಮಂಡಳಿ ಬುಧವಾರ ರದ್ದುಗೊಳಿಸಿದೆ. ಬಾಲಕನ್ನು ಜೂನ್​ 5ರವರೆಗೆ ಬಾಲ ವೀಕ್ಷಣಾ ಮಂದಿರಕ್ಕೆ ಕಳುಹಿಸಿದೆ.

- Advertisement -

ಬಾಲಾಪರಾಧಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಮತ್ತು ರಿಮಾಂಡ್ ಹೋಮ್‌ಗೆ ಕಳುಹಿಸಲು ನಾವು ಬಾಲನ್ಯಾಯ ಮಂಡಳಿಯ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದೆವು ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.

ಆಪರೇಟಿವ್ ಆದೇಶವನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ ನಮಗೆ ತಿಳಿಸಲಾಗಿದೆ ಮತ್ತು ಹೇಳಿದ ಬಾಲಾಪರಾಧಿ ಆರೋಪಿಯನ್ನು ಜೂನ್ 5 ರವರೆಗೆ 15 ದಿನಗಳವರೆಗೆ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ವಯಸ್ಕನಾಗಿ ವಿಚಾರಣೆಗೆ ಒಳಪಡುವ ಆದೇಶವನ್ನು ಸದ್ಯಕ್ಕೆ ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version