Home ಟಾಪ್ ಸುದ್ದಿಗಳು ಹಲಾಲ್ ವಿವಾದದ ಹಿನ್ನೆಲೆ; ಖರೀದಿದಾರರಿಲ್ಲದೆ ಕುರಿ ಮಾರಾಟಗಾರರು ಕಂಗಾಲು

ಹಲಾಲ್ ವಿವಾದದ ಹಿನ್ನೆಲೆ; ಖರೀದಿದಾರರಿಲ್ಲದೆ ಕುರಿ ಮಾರಾಟಗಾರರು ಕಂಗಾಲು

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಹಲಾಲ್ , ಜಟ್ಕಾ ಕಟ್ ವಿವಾದವು ರಾಜ್ಯದ ಅತಿದೊಡ್ಡ ಕುರಿ ಮಾರುಕಟ್ಟೆಯಾದ ಚಿತ್ರದುರ್ಗದಲ್ಲಿ ಕುರಿಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕುರಿ ಸಾಕುವವರು ಮತ್ತು ವ್ಯಾಪಾರಿಗಳು  ಈ ಮಾರುಕಟ್ಟೆಯಲ್ಲಿ ಹಲವು ದಶಕಗಳಿಂದ ವಹಿವಾಟು ನಡೆಸುತ್ತಿದ್ದು, ಕಳೆದ ಎರಡು ಮೂರು ತಿಂಗಳಿನಿಂದ ಮುಸ್ಲಿಂ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿವಾರ ಸುಮಾರು 8000 ದಷ್ಟು ಕುರಿಗಳು ಮಾರಾಟವಾಗುತ್ತಿದ್ದ ಮಾರುಕಟ್ಟೆಯಲ್ಲಿ ಈಗ ಕೇವಲ 3000 ಕುರಿಗಳಷ್ಟೇ ಮಾರಾಟವಾಗಿವೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಅತ್ಯಧಿಕ ಕುರಿಗಳು ಇರುವ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ಕುರಿ ಸಾಕಾಣಿಕೆಗೆ ಹೆಸರುವಾಸಿಯಾಗಿದ್ದು, ಚಳ್ಳಕೆರೆ ಮತ್ತು ಹಿರಿಯೂರು ತಾಲೂಕುಗಳು ಅತಿಹೆಚ್ಚು ಕುರಿ ಸಾಕಾಣಿಕೆದಾರರನ್ನು ಹೊಂದಿವೆ.

ಸಾಮಾನ್ಯವಾಗಿ ಕುರಿ ಬೆಲೆ 5000 ರೂಪಾಯಿಗಿಂತ ಕಡಿಮೆ ಇರುವುದಿಲ್ಲ. ಇದೀಗ ಖರೀದಿದಾರರಿಲ್ಲದೆ ಕೇವಲ 3000 ದಿಂದ 4000 ರೂಪಾಯಿಗಳಿಗೆ ಕುರಿ ಮಾರಾಟ ಮಾಡುವ ಮೂಲಕ ದೊಡ್ಡ ನಷ್ಟ ಅನುಭವಿಸುತ್ತಿದ್ದೇವೆ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Join Whatsapp
Exit mobile version