Home ಟಾಪ್ ಸುದ್ದಿಗಳು ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ: ಟ್ರಂಪ್‌ ಯೂಟರ್ನ್‌

ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ: ಟ್ರಂಪ್‌ ಯೂಟರ್ನ್‌

0

ವಾಷಿಂಗ್ಟನ್‌: ಪ್ರತಿ ಸುಂಕ ವಿಧಿಸಿ ವಿಶ್ವದ ಆರ್ಥಿಕತೆಗೆ ಹೊಡೆತ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಕೆಲ ವಾಹನ ತಯಾರಿಕಾ ಕಂಪನಿಗಳಿಗೆ ಸುಂಕಗಳಿಂದ ತಾತ್ಕಾಲಿಕ ವಿನಾಯಿತಿ ನೀಡಲು ಮುಂದಾಗಿದ್ದಾರೆ.

ಕೆಲವು ಕಾರು ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ದಾರಿ ಹುಡುಕುತ್ತಿದ್ದೇವೆ ಎಂದಿರುವ ಟ್ರಂಪ್, ಕೆನಡಾ, ಮೆಕ್ಸಿಕೋ ಮತ್ತು ಇತರ ಸ್ಥಳಗಳಿಂದ ಉತ್ಪಾದನೆ ಸ್ಥಳಾಂತರಿಸಲು ಆಟೋ ಕಂಪನಿಗಳಿಗೆ ಸಮಯ ಬೇಕಾಗುತ್ತೆ. ಪೂರೈಕೆಯನ್ನು ಸಹಜ ಸ್ಥಿತಿ ತರೋವರೆಗೆ ಸ್ವಲ್ಪ ಸಮಯ ಹಿಡಿಯಬಹುದು ಎಂದಿದ್ದಾರೆ.

ಇದು ಸುಂಕಗಳ ಮೇಲಿನ ಮತ್ತೊಂದು ಸುತ್ತಿನ ಹಿಮ್ಮುಖ ಬದಲಾವಣೆಗಳ ಬಗ್ಗೆ ಸುಳಿವು ನೀಡಿದೆ. ಆಮದು ತೆರಿಗೆಗಳ ದಾಳಿಯು ಹಣಕಾಸು ಮಾರುಕಟ್ಟೆಗಳನ್ನು ಭಯಭೀತಗೊಳಿಸಿದೆ ಮತ್ತು ಸಂಭವನೀಯ ಹಿಂಜರಿತದ ಬಗ್ಗೆ ವಾಲ್ ಸ್ಟ್ರೀಟ್ ಅರ್ಥಶಾಸ್ತ್ರಜ್ಞರಿಂದ ಆತಂಕ ಹುಟ್ಟುಹಾಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version