Home ಟಾಪ್ ಸುದ್ದಿಗಳು ತೆಲಂಗಾಣ: ಸಂಸದ, ವಿಧಾನ ಸಭಾ ಅಭ್ಯರ್ಥಿಗೆ ಚೂರಿ ಇರಿತ

ತೆಲಂಗಾಣ: ಸಂಸದ, ವಿಧಾನ ಸಭಾ ಅಭ್ಯರ್ಥಿಗೆ ಚೂರಿ ಇರಿತ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಹಾಲಿ ಸಂಸದ ಮತ್ತು ಬಿಆರ್ ಎಸ್ ಪಕ್ಷದ ಅಭ್ಯರ್ಥಿ ಕೋತಾ ಪ್ರಭಾಕರ್ ರೆಡ್ಡಿ ಚೂರಿ ಇರಿತಕ್ಕೊಳಗಾಗಿದ್ದಾರೆ. ಸುರಂಪಳ್ಳಿ ಗ್ರಾಮದಲ್ಲಿ ಒಬ್ಬ ಪ್ರಭಾಕರ ರೆಡ್ಡಿ ಅವರ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ.

ಕೋತಾ ಪ್ರಭಾಕರ ರೆಡ್ಡಿ ಸಂಸದರು ಮತ್ತು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದುಬ್ಬಾಕ್ ಕ್ಷೇತ್ರದಿಂದ ಬಿಆರ್‌ಎಸ್ ಪಕ್ಷದಿದ ಸ್ಪರ್ಧಿಸುತ್ತಿದ್ದಾರೆ ಅಂತಹ ನಾಯಕನೇ ಚೂರಿ ಇರಿತಕ್ಕೊಳಗಾಗಿರೋದು ರಾಜಕೀಯದ ನೈತಿಕ ಪತನವನ್ನು ಸೂಚಿಸುತ್ತದೆ.. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Join Whatsapp
Exit mobile version