Home ಟಾಪ್ ಸುದ್ದಿಗಳು ಹೆಚ್.ಡಿ. ರೇವಣ್ಣಗೆ ಶಾಕ್:  ಸಮನ್ಸ್ ಜಾರಿ ಮಾಡುವಂತೆ ಮತ್ತೆ ಹೈಕೋರ್ಟ್ ಆದೇಶ

ಹೆಚ್.ಡಿ. ರೇವಣ್ಣಗೆ ಶಾಕ್:  ಸಮನ್ಸ್ ಜಾರಿ ಮಾಡುವಂತೆ ಮತ್ತೆ ಹೈಕೋರ್ಟ್ ಆದೇಶ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ. ರೇವಣ್ಣ ವಿಜಯಿಯಾಗಿರೋದು ನ್ಯಾಯಯುತವಾಗಿ ಅಲ್ಲ. ಅಕ್ರಮಗಳನ್ನು ನಡೆಸುವ ಮೂಲಕ ಅವರು ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು

ವಕೀಲ ಜಿ.ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಮತ್ತೊಮ್ಮೆ ಆದೇಶಿಸಿದೆ.

ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಪರವಾಗಿ ಜಿ.ದೇವರಾಜೇಗೌಡ, ರೇವಣ್ಣ ಅವರ ಬೆಂಬಲಿಗರು ಮತದಾರರಿಗೆ ಹಣ ಹಂಚುವ ಮೂಲಕ ಮತದರಾರನ್ನು ಓಲೈಸಿದ್ದಾರೆ ಎಂಬ ಆರೋಪವೂ ಸೇರಿದಂತೆ ವಿವಿಧ ಅಕ್ರಮ ನಡೆಸಿ ಗೆದ್ದಿರುವ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು  ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

Join Whatsapp
Exit mobile version