ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಮತ್ತೊಂದು ಹೀನಾಯ ಸೋಲು

Prasthutha|

ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 113 ರನ್ ಗಳಿಂದ ಗೆದ್ದುಕೊಂಡಿರುವ ನ್ಯೂಜಿಲೆಂಡ್ ತಂಡ, ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಿದೆ.

- Advertisement -


ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 259 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 156 ರನ್ ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 255 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗಳ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್ ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಪಂದ್ಯ ಸೋತಿದೆ.


ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲೂ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ರೋಹಿತ್ ಶರ್ಮಾ 8 ಮತ್ತು ವಿರಾಟ್ ಕೊಹ್ಲಿ 17 ರನ್ ಹಾಗೂ ರಿಷಬ್ ಪಂತ್ ಶೂನ್ಯ ಸುತ್ತಿದ್ದು ತಂಡಕ್ಕೆ ಹಿನ್ನಡೆಯಾಯಿತು. ಇನ್ನು ಯಶಸ್ವಿ ಜೈಸ್ವಾಲ್ 77 ರನ್ ಸಿಡಿಸುವ ಮೂಲಕ ಭಾರತಕ್ಕೆ ಚೇತರಿಕೆ ತಂದುಕೊಟ್ಟರು. ಆದರೆ ನಂತರ ಬಂದ ಬ್ಯಾಟರ್ ಗಳು ಹೆಚ್ಚು ಕಾಲ ಕ್ರಿಸ್ ನಲ್ಲಿ ನಿಂತು ಆಡುವಲ್ಲಿ ವಿಫಲರಾದರು.



Join Whatsapp