Home ಕ್ರೀಡೆ ಅಫ್ಘಾನ್ ಸ್ಪಿನ್ ಎದುರು ಖಾತೆ ತೆರೆಯುತ್ತಾ ಟೀಮ್ ಇಂಡಿಯಾ?

ಅಫ್ಘಾನ್ ಸ್ಪಿನ್ ಎದುರು ಖಾತೆ ತೆರೆಯುತ್ತಾ ಟೀಮ್ ಇಂಡಿಯಾ?

ಅಬುಧಾಬಿ : ಐಸಿಸಿ ಟಿ- 20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡ ಬುಧವಾರ, ಸ್ಪಿನ್ ಪಂಡಿತರನ್ನು ಒಳಗೊಂಡಿರುವ ಅಫ್ಘಾನಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ.


ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳ ಅಂತರದಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ನ್ಯೂಜಿಲೆಂಡ್ ವಿರುದ್ಧವೂ ಟೀಮ್ ಇಂಡಿಯಾ ಯಾವುದೇ ರೀತಿಯಲ್ಲೂ ಸವಾಲನ್ನು ಒಡ್ಡಿದೆ ಶರಣಾಗಿತ್ತು. ಸೆಮಿಫೈನಲ್ ರೇಸ್’ ನಿಂದ ಬಹುತೇಕ ಹೊರನಡೆದಿರುವ ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಭಾರಿ ಅಂತರದಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದೆ. ಹಾಗಾದಲ್ಲಿ ರನ್’ ರೇಟ್ ಆಧಾರದ ಮೇಲೆ ಸೆಮಿ ಫೈನಲ್ ಲೆಕ್ಕಾಚಾರ ನಡೆಯಲಿದೆ. ಇದು ಸಾಧ್ಯವಾಗಬೇಕಾದರೆ ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಸೋಲು ಕಾಣಬೇಕು. ಹೀಗಾಗಿ ಟೀಮ್ ಇಂಡಿಯಾ ಭಾರಿ ಗೆಲುವು ಕಂಡರೂ ಸಹ ಉಳಿದ ತಂಡಗಳ ಫಲಿತಾಂಶವನ್ನೂ ಆಶ್ರಯಿಸಬೇಕಾಗಿದೆ.


ತಂಡದಲ್ಲಿ ಮತ್ತಷ್ಟು ಬದಲಾವಣೆ?
ಪಾಕಿಸ್ತಾನದ ವಿರುದ್ಧದ ಸೋಲಿನ ಬಳಿಕ ನ್ಯೂಜಿಲೆಂಡ್ ಪಂದ್ಯಕ್ಕೆ ಟೀಮ್ ಇಂಡಿಯಾ ಎರಡು ಬದಲಾವಣೆಗಳನ್ನು ಮಾಡಿತ್ತು. ಸೂರ್ಯಕುಮಾರ್ ಯಾದವ್ ಬದಲಿಗೆ ಇಶಾನ್ ಕಿಶನ್ ಹಾಗೂ ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದರು. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.ಹೀಗಾಗಿ ಬುಧವಾರದ ಮಹತ್ವದ ಪಂದ್ಯದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.


ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ ಎರಡೂ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿಲ್ಲ. ಹೀಗಾಗಿ ವರುಣ್ ಬದಲಿಗೆ ಅನುಭವಿ ಸ್ಪಿನ್ನರ್ ಅಶ್ವಿನ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಕಾಣುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಆರಂಭಿಕನಾಗಿದ್ದ ಇಶಾನ್ ಕಿಶನ್ ಬದಲಿಗೆ ರೋಹಿತ್ ಶರ್ಮಾ -ರಾಹುಲ್ ಜೋಡಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.ಗ್ರೂಪ್-2ರಲ್ಲಿ ಆಡಿರುವ 4 ಪಂದ್ಯಗಳಲ್ಲೂ ಜಯ ಕಂಡಿರುವ ಪಾಕಿಸ್ತಾನ ಸೆಮಿಫೈನಲ್ ಟಿಕೆಟ್ ಪಡೆದಿದೆ. 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿರುವ ಅಫ್ಘಾನಿಸ್ತಾನ, ಇಂದಿನ ಪಂದ್ಯವನ್ನು ಗೆದ್ದರೆ ನ್ಯೂಜಿಲೆಂಡ್ ಜೊತೆ ಸೆಮಿ ಟಿಕೆಟ್’ಗಾಗಿ ತೀವ್ರ ಪೈಪೋಟಿ ಏರ್ಪಡಲಿದೆ

Join Whatsapp
Exit mobile version