Home ಕ್ರೀಡೆ ಕೆಟ್ಟದಾಗಿ ಆಡುವ ದೊಡ್ಡ ಆಟಗಾರರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿ : ಕಪಿಲ್ ದೇವ್

ಕೆಟ್ಟದಾಗಿ ಆಡುವ ದೊಡ್ಡ ಆಟಗಾರರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿ : ಕಪಿಲ್ ದೇವ್

ನವದೆಹಲಿ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನದ ಬಳಿಕ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿರುವ ಟೀಮ್ ಇಂಡಿಯಾಗೆ ಮಾಜಿ ಆಟಗಾರ ಕಪಿಲ್ ದೇವ್ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.


“ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಯುವ ಆಟಗಾರರ ಕಡೆ ಆಯ್ಕೆ ಮಂಡಳಿ ಗಮನ ಹರಿಸಬೇಕಿದೆ. ಕೆಟ್ಟ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರ ಬದಲು ಯುವ ಆಟಗಾರರಿಗೆ ಅವಕಾಶಗಳನ್ನು ನೀಡಬೇಕಿದೆ. ಆ ಯುವ ಆಟಗಾರರು ಸೋತರೆ ಅವರಿಗೆ ಒಂದೊಳ್ಳೆ ಅನುಭವ ಸಿಗಲಿದೆ. ಆದರೆ ದೊಡ್ಡ ದೊಡ್ಡ ಹೆಸರುಗಳನ್ನು ಹೊಂದಿರುವ ಆಟಗಾರರು ಕಳಪೆ ಪ್ರದರ್ಶನ ನೀಡಿದರೆ ದೊಡ್ಡ ಮಟ್ಟದ ಟೀಕೆಗಳು ಎದುರಾಗುತ್ತವೆ. ಹೀಗಾಗಿ ಬಿಸಿಸಿಐ ಈ ಕುರಿತು ಮಧ್ಯಪ್ರವೇಶಿಸಬೇಕಾದ ಅಗತ್ಯತೆ ಇದೆ” ಎಂದು ಕಪಿಲ್ ದೇವ್ ಹೇಳಿದ್ದಾರೆ.

ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸುವುದು ನಿಜವಾದ ಗೆಲುವಲ್ಲ ಯುಎಇನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ
ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು, ನ್ಯೂಜಿಲೆಂಡ್ ವಿರುದ್ಧ ಬೇರೆ ಯಾವುದಾದರೂ ಒಂದು ತಂಡ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಸುಗಮವಾಗಲಿದೆ.


ಹೀಗೆ ಇತರ ತಂಡಗಳ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್ ಭವಿಷ್ಯ ನಿಂತಿದೆ. ಇದರ ಕುರಿತು ಕಪಿಲ್ ದೇವ್ ಆಕ್ರೋಶ ಹೊರಹಾಕಿದ್ದಾರೆ. “ನಾವು ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಿದರೆ ಅದನ್ನು ಯಾವತ್ತಿಗೂ ಭಾರತೀಯ ಕ್ರಿಕೆಟ್ ಪ್ರಶಂಸಿಸುವುದಿಲ್ಲ. ನೀವು ವಿಶ್ವಕಪ್ ಗೆಲ್ಲಬೇಕೆಂದರೆ ಅಥವಾ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನಿಮ್ಮ ಸ್ವಂತ ಆಟದಿಂದ ಸಾಧಿಸಿ. ಇತರರ ಮೇಲೆ ಅವಲಂಬಿತವಾಗುವುದು ಒಳ್ಳೆಯದಲ್ಲ” ಎಂದು ಕಪಿಲ್ ದೇವ್ ಹೇಳಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲಿಂಗ್- ಬ್ಯಾಟಿಂಗ್ ಎರಡೂ ವಿಭಾಗದ ಪ್ರದರ್ಶನವು ಹೀನಾಯವಾಗಿತ್ತು. ಎರಡು ಪಂದ್ಯಗಳಲ್ಲಿ ಎದುರಾಳಿ ತಂಡದ ಕೇವಲ ಎರಡು ವಿಕೆಟ್ ಪಡೆಯಲಷ್ಟೇ ಭಾರತದ ಬೌಲರ್‌ಗಳು ಸಫಲರಾಗಿದ್ದಾರೆ. ಆ ಎರಡೂ ವಿಕೆಟ್ ಜಸ್ಪ್ರಿತ್ ಬುಮ್ರಾ ಬೌಲಿಂಗ್‌ನಲ್ಲಿ ಬಂದಿತ್ತು. ಬ್ಯಾಟಿಂಗ್’ನಲ್ಲಿ ಮೊದಲ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ದಾಖಲಿಸಿದ್ದು ಬಿಟ್ಟರೆ ಪೆವಿಲಿಯನ್ ಪರೇಡ್ ನಡೆಸಿದ್ದೇ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ನಮ್ಮ ತಂಡದ ಸಾಧನೆಯಾಗಿದೆ.

Join Whatsapp
Exit mobile version