Home ಟಾಪ್ ಸುದ್ದಿಗಳು ಸೇನೆಗೆ ವಿಮಾನ ತಯಾರಿಸಲು ಮುಂದಾದ ಟಾಟಾ ಸಮೂಹ!

ಸೇನೆಗೆ ವಿಮಾನ ತಯಾರಿಸಲು ಮುಂದಾದ ಟಾಟಾ ಸಮೂಹ!

ನವದೆಹಲಿ: ಭಾರತದ ಟಾಟಾ ಸಮೂಹ ಮತ್ತು ಏರ್ ಬಸ್ ದೇಶದಲ್ಲಿ ಸಿ -295 ವಿಮಾನಗಳನ್ನು ತಯಾರಿಸಲಿದೆ ಎಂದು ಸರ್ಕಾರ ಹೇಳಿದೆ, ಇದು ರಕ್ಷಣಾ ಉತ್ಪಾದನೆಯನ್ನು ವಿಸ್ತರಿಸುವ ಒತ್ತಡದ ನಡುವೆ ಸ್ಥಳೀಯ ಖಾಸಗಿ ಕಂಪನಿಯಿಂದ ಇಂತಹ ಮೊದಲ ಉತ್ಪಾದನೆಯಾಗಿದೆ.

ಜಗತ್ತಿನ ದೊಡ್ಡ ವಿಮಾನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಯುರೋಪ್‌ ಮೂಲದ ಏರ್‌ಬಸ್‌(Airbus) ಜೊತೆಗೂಡಿ ಮೇಕ್‌ ಇನ್‌ ಇಂಡಿಯಾ ಅಡಿ ಟಾಟಾ ಸಮೂಹ ವಾಯುಸೇನೆಗೆ C-295MW ವಿಮಾನವನ್ನು ನಿರ್ಮಾಣ ಮಾಡಲಿದೆ.

ಗುಜರಾತಿನ ವಡೋದರಾದಲ್ಲಿ ನಿರ್ಮಾಣ ಘಟಕ ಆರಂಭವಾಗಲಿದ್ದು ಪ್ರಧಾನಿ ನರೇಂದ್ರ ಮೋದಿಅ.30 ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ. ಯೋಜನೆಯ ಒಟ್ಟು ವೆಚ್ಚ 21,935 ಕೋಟಿ ರೂ. ಆಗಿದ್ದು ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ. ಯುರೋಪ್‌ ಹೊರಗಡೆ ಏರ್‌ಬಸ್‌ ಕಂಪನಿ ತನ್ನ ತಯಾರಿಕಾ ಘಟಕ ತೆರೆಯುತ್ತಿರುವುದು ಇದೇ ಮೊದಲಾಗಿರುವ ಕಾರಣ ಈ ಯೋಜನೆ ಭಾರೀ ಮಹತ್ವ ಪಡೆದಿದೆ.

Join Whatsapp
Exit mobile version