Home ಟಾಪ್ ಸುದ್ದಿಗಳು ಸೇನಾ ಅಧಿಕಾರಿಯ ಬ್ಯಾಗ್‌ ಕಳ್ಳತನ; ಆಟೋ ಚಾಲಕನ ಬಂಧನ

ಸೇನಾ ಅಧಿಕಾರಿಯ ಬ್ಯಾಗ್‌ ಕಳ್ಳತನ; ಆಟೋ ಚಾಲಕನ ಬಂಧನ

ಬೆಂಗಳೂರು: ಸೇನಾ ಅಧಿಕಾರಿಯೊಬ್ಬರ 1.65 ಲಕ್ಷ ನಗದು ಇದ್ದ ಬ್ಯಾಗ್‌ ಕಳ್ಳತನ ಮಾಡಿದ ಆಟೋ ಚಾಲಕನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಆರೋಪಿಯನ್ನು ವಿಜಯನಗರದ‌ ಮೂಡಲಪಾಳ್ಯ ನಿವಾಸಿ ಪವನ್ ಎಂದು ಗುರುತಿಸಲಾಗಿದೆ. ಆಟೋ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದ ಉತ್ತರ ಭಾರತದ ನಿವಾಸಿಯಾಗಿರುವ ಸೇನಾಧಿಕಾರಿ,ಆರೋಪಿ ಪವನ್ ಅವರ ಆಟೋ ಹತ್ತಿದ್ದರು. ಬಳ್ಳಾರಿ ರಸ್ತೆಯ ಗಂಗೇನಹಳ್ಳಿ ಬಳಿ ಆಟೊ ನಿಲ್ಲಿಸಿದ್ದ ಸೇನಾಧಿಕಾರಿ, ಕುಡಿಯಲು ನೀರು ತರಲೆಂದು ಅಂಗಡಿಗೆ ಹೋಗಿದ್ದ ವೇಳೆ ಆರೋಪಿ, ಆಟೊ ಸಮೇತ ಪರಾರಿಯಾಗಿದ್ದ. ಇದೀಗ ತನಿಖೆ ನಡೆಸಿ ಆರೋಪಿಯ ಕೈಯಿಂದ₹ 1.65 ಲಕ್ಷ ನಗದು ಹಾಗೂ ಬಟ್ಟೆಗಳ ಸಮೇತ ಎರಡು ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version