ಧರ್ಮಾಧಾರಿತವಾಗಿ ಐ.ಎ.ಎಸ್ ಅಧಿಕಾರಿ ವಿರುದ್ಧ ಸಿಟ್ ತನಿಖೆ ಖಂಡನೀಯ । ಸಂಸದ ಅಸದುದ್ದೀನ್ ಉವೈಸಿ

Prasthutha|

ಹೈದರಾಬಾದ್: ಹಿರಿಯ ಐ.ಎ.ಎಸ್ ಅಧಿಕಾರಿ ಮುಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ರಾಜಕೀಯ ಪ್ರೇರಿತವಾಗಿ ಸಿಟ್ ತನಿಖೆ ನಡೆಸುತ್ತಿರುವುದು ಖಂಡನೀಯ ಎಂದು ಎ.ಐ.ಎಂ.ಐ.ಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ತಿಳಿಸಿದ್ದಾರೆ. ಈ ಸಂಬಂಧ ಅವರು ಆದಿತ್ಯನಾಥ್ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

- Advertisement -

ಇಫ್ತಿಖರುದ್ದೀನ್ ಪ್ರತಿ ಮನೆಯಲ್ಲೂ ಇಸ್ಲಾಮ್ ನ ಸಂದೇಶ ನೀಡುವ ಕುರಿತು 6 ವರ್ಷಗಳ ಹಿಂದಿನ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಐ.ಎ.ಎಸ್ ಅಧಿಕಾರಿ ವಿರುದ್ಧ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶಿಸಿದೆ.

1985 ಬ್ಯಾಚ್ ನ ಐ.ಎ.ಎಸ್ ಅಧಿಕಾರಿಯಾಗಿರುವ ಇಫ್ತಿಖರುದ್ದೀನ್ ಪ್ರಸ್ತುತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಉತ್ತರಪ್ರದೇಶ ಕಾನೂನು ಮತ್ತು ನ್ಯಾಯಾಂಗ ಸಚಿವ ಬೃಜೇಶ್ ಪಾಠಕ್, ಸರ್ಕಾರ ವೀಡಿಯೋಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತವಾಗಿ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿ 7 ದಿನಗಳಲ್ಲಿ ಸರ್ಕಾರಕ್ಕ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.

Join Whatsapp
Exit mobile version