ಚೆನ್ನೈ: ಹಿಂದಿ ಕಲಿತವರು ನಮ್ಮ ಕೊಯಮತ್ತೂರಲ್ಲಿ ಪಾನಿ ಪುರಿ ಮಾರುತ್ತಿದ್ದಾರೆ ಎಂದು ತಮಿಳುನಾಡಿನ ಶಿಕ್ಷಣ ಸಚಿವ ಕೆ. ಪೊನ್ಮುಡಿ ಹೇಳಿದ್ದಾರೆ.
ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿಗಿಂತ ಇಂಗ್ಲಿಷ್ ಮೌಲ್ಯಯುತವಾಗಿದೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾದ್ದರಿಂದ ತಮಿಳುನಾಡಿನ ವಿದ್ಯಾರ್ಥಿಗಳು ತಮಿಳು ಜೊತೆ ಇಂಗ್ಲಿಷ್ ಕಲಿಯಲಿ. ನಾವು ರಾಜ್ಯದಲ್ಲಿ ನಮ್ಮದೇ ಆದ ಶಿಕ್ಷಣ ವ್ಯವಸ್ಥೆ ನಿರ್ಮಿಸಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಪಾಲಿಸೋಣ. ತಮಿಳುನಾಡು ರಾಷ್ಟ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆಎಂದು ತಿಳಿಸಿದರು.