Home ಟಾಪ್ ಸುದ್ದಿಗಳು 3 ಜಿಲ್ಲೆಗಳಲ್ಲಿ RSS ರ‍್ಯಾಲಿಗೆ ಅನುಮತಿ ನಿರಾಕರಿಸಿದ ತಮಿಳುನಾಡು ಹೈಕೋರ್ಟ್

3 ಜಿಲ್ಲೆಗಳಲ್ಲಿ RSS ರ‍್ಯಾಲಿಗೆ ಅನುಮತಿ ನಿರಾಕರಿಸಿದ ತಮಿಳುನಾಡು ಹೈಕೋರ್ಟ್

ತಮಿಳುನಾಡು: ರಾಜ್ಯಾದ್ಯಂತ 35 ಸ್ಥಳಗಳಲ್ಲಿ ಅಕ್ಟೋಬರ್ 22 ರಿಂದ 29 ರವರೆಗೆ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಆರ್‌ಎಸ್‌ಎಸ್ ಹೈಕೋರ್ಟ್‌ನ ಮಧುರೈ ಶಾಖೆಯಲ್ಲಿ ಸಲ್ಲಿಸಿದ ಅರ್ಜಿಗೆ ಕೋರ್ಟ್​​ ತೀರ್ಪು ನೀಡಿದೆ. ಮಧುರೈ ಸೇರಿದಂತೆ ದಕ್ಷಿಣದ 14 ಜಿಲ್ಲೆಗಳ 20 ಸ್ಥಳಗಳಲ್ಲಿ 22 ರಿಂದ 29ರವರೆಗೂ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಿ ಆರ್‌ಎಸ್‌ಎಸ್ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.

ಮಧುರೈ, ತಂಜಾವೂರು, ತಿರುಚ್ಚಿ, ದಿಂಡಿಗಲ್, ತೇಣಿ, ಪುದುಕೊಟ್ಟೈ, ಕರೂರ್, ತಿರುನಲ್ವೇಲಿ, ತೂತುಕುಡಿ, ತೆಂಕಶಿ, ವಿರುಧುನಗರ, ಶಿವಗಂಗೈ, ರಾಮನಾಥಪುರಂ, ಕನ್ಯಾಕುಮಾರಿ ಸೇರಿದಂತೆ 14 ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಮನವಿಯಲ್ಲಿ ಕೇಳಿತ್ತು.

11 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಕೋರ್ಟ್ ಅನುಮತಿ ನೀಡಿದ್ದು, ಮೂರು ಜಿಲ್ಲೆಗಳಲ್ಲಿ ಅನುಮತಿ ನಿರಾಕರಿಸಿದೆ. ತಮಿಳುನಾಡಿನ ಮಧುರೈ, ರಾಮನಾಥಪುರಂ ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲು ಅನುಮತಿ ನಿರಾಕರಿಸಿದೆ.

ಅನುಮತಿ ಕೊಟ್ಟ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 20,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ. ರಾಮನಾಥಪುರಂನಲ್ಲಿಯೇ ಸುಮಾರು 7,000 ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಹೀಗಿರುವಾಗ ಮಧುರೈ, ಶಿವಗಂಗಾ ಮತ್ತು ರಾಮನಾಥಪುರ ಜಿಲ್ಲೆಗಳಲ್ಲಿ ರಕ್ಷಣೆ ನೀಡಲು ಪೊಲೀಸರಿಗೆ ಸಾಧ್ಯವಾಗದೇ ಇರಬಹುದು ಎಂದು ನ್ಯಾಯಮೂರ್ತಿ ಇಳಂಗೋವನ್ ತಿಳಿಸಿದ್ದಾರೆ.

ಅಕ್ಟೋಬರ್ 22 ರಂದು ಮಾತ್ರ ಕಾರ್ಯಕ್ರಮವನ್ನು ನಡೆಸಬೇಕು ಮತ್ತು ಕೆಲವು ಜಿಲ್ಲೆಗಳಿಗೆ ಪೊಲೀಸರು ಸೂಚಿಸಿದ ಪರ್ಯಾಯ ಮಾರ್ಗಗಳನ್ನು ಸ್ವೀಕರಿಸಬೇಕು ಎಂಬ ಷರತ್ತಿನ ಮೇಲೆ 11 ಜಿಲ್ಲೆಗಳಲ್ಲಿ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ.

Join Whatsapp
Exit mobile version