Home ಕರಾವಳಿ ತಲಪಾಡಿ: ಬೈಕ್ ಡಿವೈಡರ್ ಗೆ ಡಿಕ್ಕಿ, ಇಬ್ಬರು ಯುವಕರು ಸಾವು

ತಲಪಾಡಿ: ಬೈಕ್ ಡಿವೈಡರ್ ಗೆ ಡಿಕ್ಕಿ, ಇಬ್ಬರು ಯುವಕರು ಸಾವು

ಸಾಂದರ್ಭಿಕ ಚಿತ್ರ

ತಲಪಾಡಿ: ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ತಡ ರಾತ್ರಿ ತಲಪಾಡಿ ಕೆ.ಸಿ.ರೋಡ್ ನಲ್ಲಿ ನಡೆದಿದೆ.


ಕೆ.ಪ್ರಜಿತ್(23) ಮತ್ತು ಕೃಷ್ಣ ಪ್ರಸಾದ್ (25) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.


ದಸರಾ ಹಿನ್ನೆಲೆಯಲ್ಲಿ ಯವಕರು ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಕೆ.ಸಿ. ರೋಡ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

Join Whatsapp
Exit mobile version