Home ಟಾಪ್ ಸುದ್ದಿಗಳು ದೇಶದಲ್ಲಿ ಏರಿಕೆ ಕಂಡ ತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ

ದೇಶದಲ್ಲಿ ಏರಿಕೆ ಕಂಡ ತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ

ನವದೆಹಲಿ: ದೇಶದಲ್ಲಿ ತೈಲ ಬೆಲೆಗಳು ಮತ್ತೆ ಏರಿಕೆ ಕಂಡಿದೆ. ದೆಹಲಿಯಲ್ಲಿ 35 ಪೈಸೆ ಏರಿಕೆಯಾಗುವ ಮೂಲಕ ಒಂದು ಲೀಟರ್ ಪೆಟ್ರೋಲ್ ಬೆಲೆ 105.49 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲೂ 35 ಪೈಸೆ ಏರಿಕೆ ಕಂಡಿದ್ದು, ಅದರ ಬೆಲೆ ಒಂದು ಲೀಟರ್ ಗೆ 94.22 ರೂಪಾಯಿಗೆ ತಲುಪಿದೆ.


ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 109.16 ರೂಪಾಯಿಯಷ್ಟಿದ್ದು, ಡೀಸೆಲ್ ಬೆಲೆ 100 ರೂಪಾಯಿಯಿದೆ. ಒಂದು ವಾರದ ಹಿಂದೆ ಆಟೋ ಇಂಧನದ ಬೆಲೆ ಸತತವಾಗಿ ಏರಿಕೆ ಕಂಡಿತ್ತು. ನಂತರ ಅಕ್ಟೋಬರ್ 12 ಮತ್ತು 13ರಂದು ಬೆಲೆ ಏರಿಕೆಗೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಎರಡು ದಿನದಿಂದ ಇಂಧನದ ಬೆಲೆ ಏರಿಕೆಯಾಗುತ್ತಿದೆ.


ಮುಂಬೈನಲ್ಲಿ ಪೆಟ್ರೋಲ್ ಬೆಲೆ 34 ಪೈಸೆ, ಡೀಸೆಲ್ ಬೆಲೆ 37 ಪೈಸೆ ಏರಿಕೆ ಕಂಡಿದ್ದು, ಒಂದು ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕ್ರಮವಾಗಿ 111.43 ರೂಪಾಯಿ ಮತ್ತು 102.15 ರೂಪಾಯಿ ಆಗಿದೆ.

Join Whatsapp
Exit mobile version