Home ಟಾಪ್ ಸುದ್ದಿಗಳು ಚೈನಾ ಬ್ಲೋಫಿಶ್‌ ಡ್ರೋನ್‌ ಖರೀದಿಗೆ ಮುಂದಾದ ತಾಲಿಬಾನ್‌| ಅಮೆರಿಕ ಆತಂಕ

ಚೈನಾ ಬ್ಲೋಫಿಶ್‌ ಡ್ರೋನ್‌ ಖರೀದಿಗೆ ಮುಂದಾದ ತಾಲಿಬಾನ್‌| ಅಮೆರಿಕ ಆತಂಕ

ಕಾಬೂಲ್‌: ತಾಲಿಬಾನ್ ಸರಕಾರ ಚೀನಾದಿಂದ ಬ್ಲೋಫಿಶ್‌ ಡ್ರೋನ್‌ ಖರೀದಿಗೆ ಮುಂದಾಗಿದ್ದು, ಅಮೆರಿಕಾದ ಆತಂತಕ್ಕೆ ಕಾರಣವಾಗಿದೆ.

ಕೃತಕ ಬುದ್ಧಿಮತ್ತೆ ಅಳವಡಿಕೆಯ ಮೂಲಕ, ಗನ್‌ಗಳಿಂದ ಫೈರಿಂಗ್‌ ಮಾಡುವ, ಗ್ರೆನೇಡ್‌ಗಳನ್ನು ಎಸೆಯುವ ಸಾಮರ್ಥ್ಯವಿರುವ ಬ್ಲೋಫಿಶ್‌ ಡ್ರೋನ್‌ಗಳನ್ನು ತಾಲಿಬಾನ್ ಸರಕಾರ ಚೀನದಿಂದ ಖರೀದಿಸುವುದಕ್ಕೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

ತಾಲಿಬಾನ್‌ಗೆ ಡ್ರೋನ್‌ಗಳ ರಫ್ತು ನಿರ್ಣಯವನ್ನು ಸಮರ್ಥಿಸಿದ ಚೀನಾ, ಉಗ್ರರನ್ನು ಸದೆಬಡಿಯಲು ತಾಲಿಬಾನ್ ಸರಕಾರಕ್ಕೆ ಈ ಡ್ರೋನ್‌ ಅಗತ್ಯವಿದೆ ಎಂದು ಹೇಳಿದೆ.  ಆದರೆ, ಈ ಬಗ್ಗೆ ಅಮೆರಿಕ ಆತಂಕ ವ್ಯಕ್ತ ಪಡಿಸಿದ್ದು, ಈ ರಫ್ತು ನಿರ್ಣಯ ಸರಿಯಲ್ಲ ಎಂದು ಹೇಳಿದೆ.

Join Whatsapp
Exit mobile version