Home ಕರಾವಳಿ ಕಾರ್ಮಿಕರ ಸುರಕ್ಷಾ ಕ್ರಮಕ್ಕೆ ಆದ್ಯತೆ ನೀಡಿ ಖಾತ್ರಿಪಡಿಸಲು ಆಗ್ರಹಿಸಿ ದ.ಕ ಜಿಲ್ಲಾಧಿಕಾರಿಗೆ SDTU ಮನವಿ

ಕಾರ್ಮಿಕರ ಸುರಕ್ಷಾ ಕ್ರಮಕ್ಕೆ ಆದ್ಯತೆ ನೀಡಿ ಖಾತ್ರಿಪಡಿಸಲು ಆಗ್ರಹಿಸಿ ದ.ಕ ಜಿಲ್ಲಾಧಿಕಾರಿಗೆ SDTU ಮನವಿ

ಮಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಹಾಗೂ ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಾಗಿ ದುಡಿಯುವರ ಸುರಕ್ಷಾ ಕ್ರಮಕ್ಕೆ ಆದ್ಯತೆ ನೀಡಿ ಖಾತ್ರಿಪಡಿಸುವಂತೆ ಸಂಭಂದಪಟ್ಟ ಗುತ್ತಿಗೆದಾರ, ಮಾಲೀಕರು, ಕಂಪನಿಗಳನ್ನು ನಿರ್ಬಂಧಿಸಿ ಖಾತ್ರಿಪಡಿಸಲು ಅಗ್ರಹಿಸಿ ದಕ ಜಿಲ್ಲಾಧಿಕಾರಿಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಮನವಿ ಸಲ್ಲಿಸಿದೆ.

ಇತ್ತೀಚೆಗೆ ಸುರತ್ಕಲ್ ನಲ್ಲಿ ಗುಡ್ಡೆ ಕುಸಿದು ಓಬಳೇಶ್ವರ ಎಂಬ ಕಾರ್ಮಿಕ ಸಾವನ್ನಪ್ಪಿದ್ದು, ಇತರರಿಗೆ ತೀವ್ರ ರೀತಿಯ ಗಾಯಗಳಾದ ಘಟನೆಯ ಬಗ್ಗೆ ಹಾಗೂ ಕಳೆದ ವರ್ಷ ಎಮ್ಎಸ್ಇಝೆಡ್ (ವಿಶೇಷ ಆರ್ಥಿಕ ವಲಯ) ಮೀನಿನ ಫ್ಯಾಕ್ಟರಿಯಲ್ಲಿ ವಿಶಾನಿಲ ಸೋರಿಕೆಯಾಗಿ ಹೊರ ರಾಜ್ಯದ ಐದು ಕಾರ್ಮಿಕರು ಸಾವನ್ನಪ್ಪಿದ ಘಟನೆಯನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗೆ ನಿಯೋಗ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಶೆರೀಫ್ ಪಾಂಡೇಶ್ವರ್, ಖಾದರ್ ಫರಂಗಿಪೇಟೆ, ಮುಸ್ತಫಾ ಪರ್ಲಿಯಾ, ಸಿದ್ದೀಕ್ ಕಣ್ಣಂಗಾರ್, ನಾಸಿರ್ ಉಳಾಯಿಬೆಟ್ಟು, ಇಲ್ಯಾಸ್ ಬೆಂಗರೆ, ಮಸೂದು ಕಣ್ಣೂರು, ಅನ್ಸಾರ್ ಉಲಾಯಿಬೆಟ್ಟು ಮತ್ತಿತರರು ನಿಯೋಗದಲ್ಲಿದ್ದರು.

Join Whatsapp
Exit mobile version