ಕೈರೋ: ಭಾನುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ಬಂಡುಕೋರರು ಅಫ್ಘಾನ್ ಅಧ್ಯಕ್ಷರ ಅರಮನೆಯನ್ನು ವಶಪಡಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ನಡೆಯುತ್ತಿದ್ದ ಅಫ್ಘಾನ್ ಯುದ್ಧವನ್ನು ಕೊನೆಗೊಳಿಸಲಾಗಿದೆಯೆಂದು ಸೋಮವಾರ ತಾಲಿಬಾನ್ ಘೋಷಿಸಿದೆ. ಈ ಕುರಿತು ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್ ಪತ್ರಿಕಾಗೋಷ್ಠಿ ನಡೆಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ನಾಗರೀಕರನ್ನು ತಾಲಿಬಾನ್ ವಶದಲ್ಲಿರುವ ಕಾಬೂಲ್ ನಿಂದ ಸ್ಥಳಾಂತರಕ್ಕೆ ಹರಸಾಹಸ ಪಡುತ್ತಿವೆ. ಕಾಬೂಲ್ ವಿಮಾನ ನಿಲ್ದಾಣಗಳು ತುಂಬಿ ತುಳುಕುತ್ತಿವೆ. ಅಮೇರಿಕಾ ಮತ್ತು ಮಿತ್ರಪಡೆಗಳು ತಾಲಿಬಾನ್ ಬಂಡುಕೋರರು ಕಾಬೂಲ್ ನಗರವನ್ನು ವಶಪಡಿಸುವುದರೊಂದಿಗೆ ಅಫ್ಘಾನ್ ತೊರೆದಿತ್ತು. ಮಾತ್ರವಲ್ಲದೆ ಭಾರತ ಮೂಲಕ ಏರ್ ಇಂಡಿಯಾ ವಿಮಾನವು ತುರ್ತು ನಿರ್ಗಮನಕ್ಕಾಗಿ ತನ್ನ 2 ವಿಮಾನಗಳನ್ನು ಸಜ್ಜುಗೊಳಿಸಿವೆ ಎಂದು ಏರ್ ಇಂಡಿಯಾ ಪೈಲಟ್ಸ್ ಅಸೋಸಿಯೇಶನ್ (ICPA) ನ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಟಿ ಪ್ರವೀಣ್ ಕೀರ್ತಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಸಕ್ತ ಕಾಬೂಲ್ ನಿಂದ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಕಾಬೂಲ್ ವಿಮಾನ ನಿಲ್ದಾಣದ ರಸ್ತೆಯನ್ನು ರಾತ್ರಿಯಿಂದ ನಿರ್ಬಂಧಿಸಲಾಗಿದೆ ಎಂದು ಮೂಲಗಳು ಸೂಚಿಸಿವೆ. ಮಾತ್ರವಲ್ಲದೆ ಮೊಬೈಲ್ ನೆಟ್ವರ್ಕ್ ಸ್ಥಗಿತಗೊಂಡಿದೆಯೆಂದು ಹೇಳಲಾಗುತ್ತಿದೆ. ಕಾಬೂಲ್ ನಿಂದ ಬಹುತೇಕ ವಿಮಾನಗಳು ಸ್ಥಗಿತಗೊಳಿಸಲಾಗಿದೆಯೆಂದು ವಿಮಾನಯಾನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾಬೂಲ್ ನಗರವನ್ನು ವಶಪಡಿಸುವ ಮೂಲಕ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ ಪತ್ರಿಕಾಗೋಷ್ಠಿ ನಡೆಸಿ ಪ್ರಸಕ್ತ ವಿದ್ಯಮಾನಗಳ ಮಾಹಿತಿ ನೀಡಿದೆ. ಮಾಧ್ಯಮದೊಂದಿಗೆ ಮಾತಾನಾಡಿದ ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್ ಅವರು 20 ವರ್ಷಗಳ ಸತತ ಹೋರಾಟದಿಂದ ಅಫ್ಘಾನ್ ನಲ್ಲಿ ಸರ್ವಾಧಿಕಾರ ಯುಗಾಂತ್ಯವಾಗಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ಜನತೆ ಮತ್ತು ಹೋರಾಟಗಾರಿಗೆ ಇದು ಸುದಿನ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಸದ್ಯ ಅಫ್ಘಾನ್ ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರ ತೊರೆಯಲು ಅವಕಾಶ ನೀಡಬೇಕೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಒತ್ತಾಯಿಸಿದೆ. ಕಾಬೂಲ್ ನ ಲಕ್ಷಾಂತರ ನಿವಾಸಿಗಳಿಗೆ ಅಪಾಯವನ್ನುಂಟು ಮಾಡುವ ತಾಲಿಬಾನ್ ಜೊತೆಗಿನ ಘರ್ಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನಿರ್ಗನಿತ ಅಧ್ಯಕ್ಷ ಘನಿ ದೇಶವನ್ನು ತೊರೆದಿದ್ದಾರೆ ಎಂದು ಅಫ್ಘಾನ್ ಮೂಲಗಳು ಸ್ಪಷ್ಟಪಡಿಸಿವೆ.