Home ಟಾಪ್ ಸುದ್ದಿಗಳು ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿಗೆ ಯುಪಿಎಸ್ಸಿ ಯಲ್ಲಿ 482ನೇ ರ್‍ಯಾಂಕ್

ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿಗೆ ಯುಪಿಎಸ್ಸಿ ಯಲ್ಲಿ 482ನೇ ರ್‍ಯಾಂಕ್

ಹುಬ್ಬಳ್ಳಿ: ಕೇಂದ್ರ ಲೋಕಸಭಾ ಆಯೋಗದ (ಯುಪಿಎಸ್ ಸಿ) 2021ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ, ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿ ಮೊದಲ ಪ್ರಯತ್ನದಲ್ಲೇ 482ನೇ ರ್‍ಯಾಂಕ್ ಪಡೆದಿದ್ದಾರೆ. ತಹ್ಸೀನ್ ಬಾನು ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿಯ ಪುತ್ರಿಯಾಗಿದ್ದಾಳೆ.

ಹುಬ್ಬಳ್ಳಿ ನಗರದ ನಿವಾಸಿಯಾಗಿರುವ ತಹ್ಸೀನ್ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಮ್ ಯುವತಿಯಾಗಿದ್ದು, ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.

Join Whatsapp
Exit mobile version