Home ಟಾಪ್ ಸುದ್ದಿಗಳು ಟಿ20 ವಿಶ್ವಕಪ್‌ | ನೆದರ್ಲ್ಯಾಂಡ್‌ ವಿರುದ್ಧ ಟೀಮ್‌ ಇಂಡಿಯಾಗೆ 56 ರನ್‌ಗಳ ಭರ್ಜರಿ ಜಯ

ಟಿ20 ವಿಶ್ವಕಪ್‌ | ನೆದರ್ಲ್ಯಾಂಡ್‌ ವಿರುದ್ಧ ಟೀಮ್‌ ಇಂಡಿಯಾಗೆ 56 ರನ್‌ಗಳ ಭರ್ಜರಿ ಜಯ

ಸಿಡ್ನಿ: ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ, ನೆದರ್ಲ್ಯಾಂಡ್‌ ತಂಡವನ್ನು 56 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ 2 ವಿಕೆಟ್‌ ನಷ್ಟದಲ್ಲಿ 179 ರನ್‌ಗಳಿಸಿತ್ತು. 180 ರನ್‌ಗಳ ಗುರಿ ಪಡೆದ ನೆದರ್‌ಲ್ಯಾಂಡ್‌  ತಂಡವು ಭಾರತದಬಿಗು ಬೌಲಿಂಗ್‌ ದಾಳಿ ಎದುರಿಸಲಾಗದೆ  20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಮ್‌ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಚೇಸಿಂಗ್‌ ವೇಳೆ ನೆದರ್ಲ್ಯಾಂಡ್‌, ನಿರಂತರ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿತು. ಟಿಮ್‌ ಪ್ರಿಂಗಲ್‌ (20 ರನ್‌) ಅವರದ್ದೇ ಸರ್ವಾಧಿಕ ಗಳಿಕೆ. ಭಾರತದ ಪರ  ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಅ‌ಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಆಸ್ಟ್ರೇಲಿಯದ ಸಿಡ್ನಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ನಿಗದಿತ 20 ಓವರ್‌ಗಳಲ್ಲಿ  2 ವಿಕೆಟ್‌ ನಷ್ಟದಲ್ಲಿ 179 ರನ್‌ ಕಲೆಹಾಕಿತ್ತು. ಇನ್ನಿಂಗ್ಸ್‌ ಆರಂಭಿಸಿದ ಕೆ.ಎಲ್‌ ರಾಹುಲ್‌ 9 ರನ್‌ ಗಳಿಸಿ ವ್ಯಾನ್ ಮೀಕರನ್‌ಗೆ ವಿಕೆಟ್ ಒಪ್ಪಿಸಿದರು.  ಎರಡನೇ ವಿಕೆಟ್‌ಗೆ ಜೊತೆಯಾದ ನಾಯಕ ರೋಹಿತ್‌ ಶರ್ಮಾ –ವಿರಾಟ್‌ ಕೊಹ್ಲಿ ರಕ್ಷಣಾತ್ಮಕ ಆಟವಾಡಿದರು. ರೋಹಿತ್‌ 39 ಎಸೆತಗಳಲ್ಲಿ 53 ರನ್‌ ಗಳಿಸಿ ಕ್ಲಾಸೆನ್‌ಗೆ ವಿಕೆಟ್‌ ಒಪ್ಪಿಸಿದರು. ಕೊಹ್ಲಿ 44 ಎಸೆತಗಳಲ್ಲಿ 62 ರನ್ ಗಳಿಸಿದರೆ, ಭರ್ಜರಿ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಕಲೆಹಾಕಿದರು.

Join Whatsapp
Exit mobile version