Home ಕರಾವಳಿ ಉಡುಪಿ | ಕಾರಿನ ಮೇಲೆ ಪಟಾಕಿ ಸಿಡಿಸಿ ಬೇಕಾಬಿಟ್ಟಿ ಸಂಚಾರ: ವ್ಯಾಪಕ ಆಕ್ರೋಶ

ಉಡುಪಿ | ಕಾರಿನ ಮೇಲೆ ಪಟಾಕಿ ಸಿಡಿಸಿ ಬೇಕಾಬಿಟ್ಟಿ ಸಂಚಾರ: ವ್ಯಾಪಕ ಆಕ್ರೋಶ

ಉಡುಪಿ: ಕಾರಿನ ಟಾಪ್ ಮೇಲೆ ಪಟಾಕಿ ಸಿಡಿಸಿ ಯುವಕನೋರ್ವ ಬೇಕಾಬಿಟ್ಟಿ ಸಂಚಾರ ಮಾಡಿದ ಘಟನೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ.


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ದೀಪಾವಳಿ ಸಂಭ್ರಮದ ನಡುವೆ ಯುವಕ ಹುಚ್ಚಾಟ ಮೆರೆದಿದ್ದು, ಕಾರಿನ ಟಾಪಿನ ಮೇಲೆ ರಾಕೆಟ್ ಶಾಟ್ಸ್ ಇಟ್ಟು ಬೇಕಾಬಿಟ್ಟಿ ಸಂಚಾರ ಮಾಡಿದ್ದಾನೆ.


ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ರಸ್ತೆಯ ಎರಡೂ ಬದಿ ಆಸ್ಪತ್ರೆ, ಕಾಲೇಜು ಇದ್ದು ಜನನಿಬಿಡವಾಗಿದೆ. ಈ ರಸ್ತೆಯಲ್ಲಿ ಈ ರೀತಿ ಹುಚ್ಚಾಟ ನಡೆಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆತನ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಆಗ್ರಹ ಮಾಡಿದ್ದಾರೆ.

Join Whatsapp
Exit mobile version