Home ಟಾಪ್ ಸುದ್ದಿಗಳು ಹರಿಯಾಣದಲ್ಲಿ ಕಾಂಗ್ರೆಸ್ ಮತಗಳ ವಿಭಜನೆ, ಇಂಡಿಯಾ ಮೈತ್ರಿಗೆ ದ್ರೋಹ: AAP ವಿರುದ್ಧ ಸ್ವಾತಿ ಮಲಿವಾಲ್ ವಾಗ್ದಾಳಿ

ಹರಿಯಾಣದಲ್ಲಿ ಕಾಂಗ್ರೆಸ್ ಮತಗಳ ವಿಭಜನೆ, ಇಂಡಿಯಾ ಮೈತ್ರಿಗೆ ದ್ರೋಹ: AAP ವಿರುದ್ಧ ಸ್ವಾತಿ ಮಲಿವಾಲ್ ವಾಗ್ದಾಳಿ

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿದ್ದು, INDIA ಮೈತ್ರಿಕೂಟಕ್ಕೆ ದ್ರೋಹ ಬಗೆದಿದೆ ಎಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ವಾಗ್ದಾಳಿ ನಡೆಸಿದ್ದಾರೆ.


ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಹಾಳು ಮಾಡುವ ಏಕೈಕ ಉದ್ದೇಶದಿಂದ AAP ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಇದು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಗೆದ ದ್ರೋಹ ಎಂದಿದ್ದಾರೆ.


ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮಲಿವಾಲ್, ಎಎಪಿ ನನ್ನನ್ನು ಬಿಜೆಪಿ ಏಜೆಂಟ್ ಎಂದು ಸುಳ್ಳು ಆರೋಪ ಮಾಡಿತ್ತು. ಇಂದು ಅದು ಸ್ವತಃ ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಮಾಡುತ್ತಿದೆ ಮತ್ತು ಕಾಂಗ್ರೆಸ್ ಮತಗಳನ್ನು ವಿಭಜಿಸುತ್ತಿದೆ! ಬಿಜೆಪಿ ಸೋಲಿಸುವ ಬದಲು ಕಾಂಗ್ರೆಸ್ಗೆ ಹಾನಿ ಮಾಡುವ ಏಕೈಕ ಉದ್ದೇಶದಿಂದ ವಿನೇಶ್ ಫೋಗಟ್ ಅವರಂತಹ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version