Home ಮಾಹಿತಿ ಗ್ರೂಪ್ A, B ಹುದ್ದೆಗೆ ಕೆಪಿಎಸ್ ಸಿ, ಗ್ರೂಪ್ ಸಿ ಹುದ್ದೆಗೆ ಕೆಇಎ ನೇಮಕ ಪ್ರಕ್ರಿಯೆ:...

ಗ್ರೂಪ್ A, B ಹುದ್ದೆಗೆ ಕೆಪಿಎಸ್ ಸಿ, ಗ್ರೂಪ್ ಸಿ ಹುದ್ದೆಗೆ ಕೆಇಎ ನೇಮಕ ಪ್ರಕ್ರಿಯೆ: 34,863 ಹುದ್ದೆ ಭರ್ತಿಗೆ ಸೂಚನೆ

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನವರು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳ ಹುದ್ದೆಗಳಲ್ಲಿನ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಕಾಲಮಿತಿಗೆ ಸೂಚನೆ ನೀಡಿದ್ದು, ಒಟ್ಟಾರೆ 34,863 ಹುದ್ದೆ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.


ಕರ್ನಾಟಕ ಸರ್ಕಾರದಡಿಯ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಪೋಸ್ಟ್ ಗಳನ್ನು ತುಂಬಲು ಕಾಲ ಮಿತಿ ನಿಗದಿಪಡಿಸಿಕೊಂಡು ನೇಮಕ ಪ್ರಕ್ರಿಯೆ ಕೈಗೊಳ್ಳಬೇಕು. ಅಗತ್ಯ ಸೇವೆಗಳ ಇಲಾಖೆಗಳಲ್ಲಿ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಇಲಾಖೆಗಳಿಗೆ ಸೂಚಿಸಿದ್ದಾರೆ.


ಸರ್ಕಾರ ಇನ್ಮುಂದೆ ಯುಪಿಎಸ್ಸಿ ಮಾದರಿಯಲ್ಲಿ ಏಕರೀತಿ ನೇಮಕಾತಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಿವಿಧ ಇಲಾಖೆಗಳ ನೇಮಕಾತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ನಿರ್ದೇಶನ ಕೊಟ್ಟಿದ್ದಾರೆ. ನೇಮಕಾತಿ ಸುಧಾರಣೆಗಾಗಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಎಲ್ಲ ನೇಮಕಾತಿ ಪ್ರಾಧಿಕಾರಗಳ ಸಭೆಯಲ್ಲಿ ಕೈಗೊಂಡ ಶಿಫಾರಸು ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.

ಸಿಎಂ ನಿರ್ದೇಶಿಸಿರುವ ಮಹತ್ವದ ಅಂಶಗಳು
371ಜೆ’ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದವರಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆ ಭರ್ತಿಗೆ 2023 ರ ಸುತ್ತೋಲೆ ಅನುಸರಿಸಬೇಕು.
ಲೋಕೋಪಯೋಗಿ, ನೀರಾವರಿ ಸೇರಿ ವಿವಿಧ ಇಲಾಖೆಗಳ ಜೂನಿಯರ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್ ನೇಮಕಕ್ಕೆ ಸಂಬಂಧಿಸಿದಂತೆ ಕೆಎಎಸ್ ಮಾದರಿ ಪರೀಕ್ಷೆ ನಡೆಸಿ ನೇಮಕ ಪ್ರಕ್ರಿಯೆ ಕೈಗೊಳ್ಳಬೇಕು.
ರಾಜ್ಯ ದಲ್ಲಿ 42 ಇಲಾಖೆಗಳ ವೃಂದ ಹಾಗೂ ನೇಮಕ ನಿಯಮ ತಿದ್ದುಪಡಿಯಾಗದ ಕಾರಣ ನೇಮಕ ವಿಳಂಬ ಆಗುತ್ತಿದೆ. ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ಸಿ & ಆರ್ ತಿದ್ದುಪಡಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಿಗೆ ಅನುಕೂಲ ವಾಗುವಂತೆ ಮಾದರಿ ಸಿ ಅಂಡ್ ಆರ್ ಸಿದ್ದಪಡಿಸುಂತೆ ನಿರ್ದೇಶಿಸಿದರು.

Join Whatsapp
Exit mobile version