ಬೆಂಗಳೂರು: ಭೀಕರ ಮಳೆಯಿಂದ ಬೆಂಗಳೂರು ಸಂಪೂರ್ಣ ಜಲಾವೃತವಾಗಿರುವಾಗ ದೋಸೆ ಪ್ರಮೋಶನ್ ಮಾಡಿ ಟ್ರೋಲ್ ಆದ ಬಳಿಕ ಸಂಸದ ತೇಜಸ್ವಿ ಸೂರ್ಯ ಪ್ರವಾಹದ ಬಗ್ಗೆ ಎಚ್ಚರವಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬೆಂಗಳೂರಿನ ಪ್ರವಾಹವು ಷಡ್ಯಂತ ಎಂದು ಸಂಸದ ಸೂರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ಟೆಂಪ್ಟ್ ಆಗಿ ದೋಸೆ ತಿನ್ನಲು ಹೋಗಿದ್ದ ಎಳೆ ಸಂಸದ ಸೂರ್ಯ ಇದೀಗ ದಿಢೀರನೆ ಹೇಳಿಕೆ ಕೊಡಲು ಪ್ರತ್ಯಕ್ಷವಾಗಿದ್ದಾರೆ. ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ. ಯಾರು ವರುಣದೇವನ ಷಡ್ಯಂತ್ರವೇ, ಮೇಘರಾಜನ ಷಡ್ಯಂತ್ರವೇ ಅಥವಾ 40% ಕಮಿಷನ್ ಲೂಟಿಕೋರರ ಷಡ್ಯಂತ್ರವೇ ? ಸಂಸದರು ಉತ್ತರಿಸುವಿರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ
ಬೆಂಗಳೂರು ಭೀಕರ ಪ್ರವಾಹವನ್ನು ಎದುರಿಸುತ್ತಿರುವುದರ ಮಧ್ಯೆ ಸಂಸದರು ದೋಸೆ ಪ್ರಮೋಟ್ ಮಾಡಿ ರೀಲ್ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದೋಸೆ ಟ್ರೋಲ್ ಮುಜುಗರವನ್ನು ತಪ್ಪಿಸಲು ಸಂಸದರು ಇದೀಗ ಪ್ರವಾಹದ ಬಗ್ಗೆ ಹೇಳಿಕೆ ನೀಡಿದ್ದು ಅದೂ ಕೂಡಾ ವಿವಾದಾತ್ಮಕವಾಗಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯರನ್ನು ‘ಎಳೆ ಸಂಸದ’ ಎಂದು ಕರೆದು ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಕೇಳಿದೆ