Home ಟಾಪ್ ಸುದ್ದಿಗಳು ನಗರ ಪ್ರದೇಶಗಳ ಜನರ ಮಾನಸಿಕ ಆರೋಗ್ಯ ಸ್ಥಿತಿಗತಿ ಕುರಿತು ಸಮೀಕ್ಷೆ: ಡಾ.ಪ್ರತಿಮಾ ಮೂರ್ತಿ

ನಗರ ಪ್ರದೇಶಗಳ ಜನರ ಮಾನಸಿಕ ಆರೋಗ್ಯ ಸ್ಥಿತಿಗತಿ ಕುರಿತು ಸಮೀಕ್ಷೆ: ಡಾ.ಪ್ರತಿಮಾ ಮೂರ್ತಿ

ಬೆಂಗಳೂರು: ನಗರ ಪ್ರದೇಶಗಳ ಜನರ ಮಾನಸಿಕ ಆರೋಗ್ಯ ಸ್ಥಿತಿಗತಿ ಕುರಿತಂತೆ ನಿಮ್ಹಾನ್ಸ್ ಸಂಸ್ಥೆ ದೇಶದ ವಿವಿಧ ನಗರಗಳಲ್ಲಿ ಸಮೀಕ್ಷೆ ನಡೆಸಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದ್ದಾರೆ.


ನಗರದಲ್ಲಿಂದು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಒಟ್ಟು 18 ರಿಂದ 20 ಸಾವಿರ ಮಂದಿಯನ್ನು ಸಂದರ್ಶಿಸಲಾಗುವುದು ಎಂದರು.


ದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಹೈದರಾಬಾದ್ ನಲ್ಲಿ ಸಮೀಕ್ಞೆಗೆ ಸ್ಥಳ ಗುರುತಿಸಲಾಗಿದೆ. ಜನರ ಮಾನಸಿಕ ಪರಿಸ್ಥಿತಿ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಲಾಗುವುದು ಎಂದು ಹೇಳಿದರು.

Join Whatsapp
Exit mobile version