Home ಟಾಪ್ ಸುದ್ದಿಗಳು ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವ ರೋಗಿಗಳಿಗಾಗಿ ವಿಶೇಷ ಮಾರ್ಗಸೂಚಿ: ಡಾ.ಕೆ.ಸುಧಾಕರ್

ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವ ರೋಗಿಗಳಿಗಾಗಿ ವಿಶೇಷ ಮಾರ್ಗಸೂಚಿ: ಡಾ.ಕೆ.ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವ ರೋಗಿಗಳಿಗಾಗಿ ವಿಶೇಷ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಟ್ವೀಟ್ ನಲ್ಲಿ ಮಾಹಿತಿ ನೀಡಿರುವ ಅವರು, ಮಾರ್ಗಸೂಚಿ ಅನ್ವಯ, ಒಮಿಕ್ರಾನ್ ಸೋಂಕು ಕಂಡುಬಂದ ಹತ್ತು ದಿನಗಳ ಬಳಿಕ ಯಾವುದೇ ರೋಗ ಲಕ್ಷಣಗಳಿಲ್ಲದಿರುವ ವ್ಯಕ್ತಿಯನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ಆಸ್ಪತ್ರೆಯಿಂದ ಬಿಡುಗಡೆಹೊಂದುವ 24 ಗಂಟೆಗಿಂತ ಮುಂಚಿನ 2 ಆರ್ ಟಿಪಿಸಿಆರ್ ನೆಗೆಟಿವ್ ವರದಿಗಳನ್ನು ವ್ಯಕ್ತಿ ಹೊಂದಿರಬೇಕು ಎಂದು ತಿಳಿಸಲಾಗಿದೆ ಎಂದಿದ್ದಾರೆ.


ಬಿಡುಗಡೆಯಾದ ನಂತರ ಕನಿಷ್ಠ 7 ದಿನಗಳ ವರೆಗೆ ವ್ಯಕ್ತಿ ಹೋಮ್ ಕ್ವಾರಂಟೈನ್‌ನಲ್ಲಿದ್ದು ಸ್ವ-ಪರಿಶೀಲನೆಗೆ ಒಳಪಡಬೇಕು. ಹೋಮ್ ಕ್ವಾರೆಂಟೈನ್ ಅವಧಿಯಲ್ಲಿ ಆರನೇ ದಿನಕ್ಕೆ ಮತ್ತೆ ವ್ಯಕ್ತಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ

Join Whatsapp
Exit mobile version