Home ಟಾಪ್ ಸುದ್ದಿಗಳು ನಟ ಶಿವರಾಜ್ ಕುಮಾರ್’ರನ್ನು ಭೇಟಿಯಾದ ಸುರ್ಜೆವಾಲ

ನಟ ಶಿವರಾಜ್ ಕುಮಾರ್’ರನ್ನು ಭೇಟಿಯಾದ ಸುರ್ಜೆವಾಲ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸ್ಯಾಂಡಲ್ ವುಡ್ ನಟ ಶಿವರಾಜಕುಮಾರ್ ಅವರನ್ನು ಭೇಟಿಯಾಗಿದ್ದಾರೆ.


ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಪರವಾಗಿ ಪ್ರಚಾರ ಮಾಡಿದ್ದ ಶಿವರಾಜಕುಮಾರ್ ಅವರು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಈಗ ಅವರಿಗೆ ಸಿಕ್ಕಿಲ್ಲ, ಹೀಗಾಗಿ ಅವರಿಗೆ ಸಮಾಧಾನ ಮಾಡಲು ರಣದೀಪ್ ಸುರ್ಜೇವಾಲಾ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ.


ಸ್ಟಾರ್ ದಂಪತಿಯನ್ನು ಭೇಟಿಯಾಗಿರುವ ರಣದೀಪ್ ಸುರ್ಜೇವಾಲಾ, ಪಕ್ಷವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಹಾಗೂ ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿದ್ದಾರೆ.

Join Whatsapp
Exit mobile version