Home ಟಾಪ್ ಸುದ್ದಿಗಳು ತಮಿಳುನಾಡು ಸರ್ಕಾರ, ವಣ್ಣಿಯಾರ್ ಸಮುದಾಯಕ್ಕೆ ನೀಡಿದ್ದ ಶೇ.10.5 ಮೀಸಲಾತಿ ರದ್ದುಪಡಿಸಿದ ಸುಪ್ರೀಂಕೋರ್ಟ್

ತಮಿಳುನಾಡು ಸರ್ಕಾರ, ವಣ್ಣಿಯಾರ್ ಸಮುದಾಯಕ್ಕೆ ನೀಡಿದ್ದ ಶೇ.10.5 ಮೀಸಲಾತಿ ರದ್ದುಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ: ತಮಿಳುನಾಡು ಸರ್ಕಾರ ಅಲ್ಲಿನ ವಣ್ಣಿಯಾರ್ ಸಮುದಾಯಕ್ಕೆ ಕಾಲೇಜು ಪ್ರವೇಶಾತಿ ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ನೀಡಿದ್ದ ಶೇಕಡಾ 10.5ರಷ್ಟು ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ವಣ್ಣಿಯಾರ್ ಸಮುದಾಯಕ್ಕೆ ಮೀಸಲಾತಿ ನೀಡಲು ಅಗತ್ಯವಿರುವ ದತ್ತಾಂಶವನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ವಣ್ಣಿಯಾರ್ ಸಮುದಾಯಕ್ಕೆ ರಾಜ್ಯ ಕೋಟಾ ಕಾಯಿದೆಯಡಿ ಶೇ.10.5 ಮೀಸಲಾತಿಯನ್ನು ತಮಿಳುನಾಡು ಸರ್ಕಾರ ಕಲ್ಪಿಸಿತ್ತು. ಇದನ್ನು ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ರಾಜ್ಯ ಸರ್ಕಾರದ ನಡೆ ಸಂವಿಧಾನಕ್ಕೆ ವಿರುದ್ಧ ಎಂದು ರಾಜ್ಯ ಸರ್ಕಾರದ ತೀರ್ಮಾನವನ್ನು ವಜಾಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

Join Whatsapp
Exit mobile version