Home ಟಾಪ್ ಸುದ್ದಿಗಳು ಮುಷ್ಕರದಲ್ಲಿ ಭಾಗವಹಿಸದ ಕಾರಣಕ್ಕೆ ಬಸ್ ಚಾಲಕನಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ನೌಕರರು

ಮುಷ್ಕರದಲ್ಲಿ ಭಾಗವಹಿಸದ ಕಾರಣಕ್ಕೆ ಬಸ್ ಚಾಲಕನಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ನೌಕರರು

ಚಂಡೀಗಡ: ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗವಹಿಸಲು ನಿರಾಕರಿಸಿದ ಕಾರಣ ಸಿರ್ಸಾ ಜಿಲ್ಲೆಯ ದಬ್ವಾಲಿಯಲ್ಲಿ ಹರಿಯಾಣ ರೋಡ್ವೇಸ್ ಬಸ್ ಚಾಲಕನಿಗೆ ಕೆಲ ನೌಕರರು  ಚಪ್ಪಲಿಯ ಹಾರ ಹಾಕಿ, ನಿರ್ವಾಹಕನಿಗೆ ತೀವ್ರವಾಗಿ ಥಳಿಸಿರುವ ಘಟನೆ ನಡೆದಿದೆ.

ಚಾಲಕ ಮತ್ತು ಕಂಡಕ್ಟರ್ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಾರಿಗೆ ಸಚಿವ ಮೂಲ್ ಚಂದ್ ಶರ್ಮಾ ತಿಳಿಸಿದ್ದಾರೆ. ಕೇಂದ್ರದ ತಪ್ಪು ನೀತಿಗಳನ್ನು ವಿರೋಧಿಸಿ ಮಾರ್ಚ್ 28-29 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರವನ್ನು ರೋಡ್ ವೇಸ್ ನೌಕರರು ಬೆಂಬಲಿಸಿದ್ದರಿಂದ ಹರಿಯಾಣದಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಸಾರಿಗೆ ಸೇವೆಗಳು ಸ್ಥಗಿತಗೊಂಡಿದ್ದವು. ಆದರೆ ಇವರಿಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ

Join Whatsapp
Exit mobile version