ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೊಟಕುಗೊಂಡ ಪಂಜಾಬ್ ಭೇಟಿಯ ಎಲ್ಲ ದಾಖಲೆಗಳನ್ನು ಭದ್ರ ಪಡಿಸಿಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ನೋಂದಣಿ ಜನರಲ್ ರಿಗೆ ಸುಪ್ರೀಂ ಕೋರ್ಟು ಶುಕ್ರವಾರ ಆದೇಶಿಸಿದೆ.
ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ ಅವರ ನೇತೃತ್ವದ ನ್ಯಾಯ ಪೀಠವು, ಪಂಜಾಬ್ ಸರಕಾರ, ಪೊಲೀಸ್ ಮುಖ್ಯಸ್ಥರು, ಎಸ್ ಪಿಜಿ ಹಾಗೂ ಕೇಂದ್ರ ಹಾಗೂ ರಾಜ್ಯದ ತನಿಖಾ ಏಜೆನ್ಸಿಗಳು ಹೈಕೋರ್ಟಿನ ಆರ್ ಜಿ- ರಿಜಿಸ್ಟ್ರಾರ್ ಜನರಲ್ ಅವರಿಗೆ ಎಲ್ಲ ರೀತಿಯಲ್ಲೂ ಸಹಕರಿಸುವಂತೆಯೂ ಆದೇಶ ಹೊರಡಿಸಿತು.
ಈ ಸುಪ್ರೀಂ ಕೋರ್ಟ್ ಪೀಠದಲ್ಲಿ ರಮಣ ಅವರಲ್ಲದೆ ಜಸ್ಟೀಸ್ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರೂ ಇದ್ದರು. ಚಂಡೀಗಡದಲ್ಲಿರುವ ಹೈಕೋರ್ಟ್ ನೋಂದಣಾಧಿಕಾರಿಗೆ ಸಕಲ ನೆರವು ನೀಡುವಂತೆ ಅವರು ಎನ್ ಐಎ ಅವರಿಗೂ ತಿಳಿಸಿತು. ಪ್ರಧಾನಿ ಭೇಟಿ ವೇಳೆ ನಡೆದ ಬಂದ್ ಸಂಬಂಧದ ಎಲ್ಲ ದಾಖಲೆಗಳು ಆರ್ ಜಿ ಬಳಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವಂತೆಯೂ ನ್ಯಾಯ ಪೀಠ ಹೇಳಿತು. ಜನವರಿ 10ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ರಾಜ್ಯ ಸರಕಾರವು ತನ್ನ ತನಿಖಾದಳ ಮತ್ತು ನೇಮಿಸಿರುವ ಸಮಿತಿಯಿಂದ ಪ್ರಧಾನಿ ಭೇಟಿ ಕಾಲದ ಭದ್ರತಾ ಕೊರತೆ ಬಗ್ಗೆ ಮಾಹಿತಿ ಕಲೆ ಹಾಕುವಂತೆಯೂ ಸರ್ವೋಚ್ಚ ನ್ಯಾಯಾಲಯವು ಸೂಚಿಸಿತು.
ದೆಹಲಿಯ ಲಾಯರ್ಸ್ ವಾಯ್ಸ್ ಸಂಸ್ಥೆಯ ಅರ್ಜಿಯ ಮೇಲೆ ಈ ವಿಚಾರಣೆ ನಡೆದಿದೆ.