Home ಟಾಪ್ ಸುದ್ದಿಗಳು ಧ್ವನಿ ಬದಲಿಸುವ ಆಯಪ್ ಬಳಸಿ ವಿದ್ಯಾರ್ಥಿನಿಯರ ಅತ್ಯಾಚಾರ: ಮೂರು ಆರೋಪಿಗಳ ಮನೆ ಧ್ವಂಸ

ಧ್ವನಿ ಬದಲಿಸುವ ಆಯಪ್ ಬಳಸಿ ವಿದ್ಯಾರ್ಥಿನಿಯರ ಅತ್ಯಾಚಾರ: ಮೂರು ಆರೋಪಿಗಳ ಮನೆ ಧ್ವಂಸ

ಮಧ್ಯ ಪ್ರದೇಶ: ರಾಜ್ಯದ ಸಿಧಿ ಜಿಲ್ಲೆಯಲ್ಲಿ ಸ್ಕಾಲರ್‌ಶಿಪ್ ಹೆಸರಿನಲ್ಲಿ 7 ಬುಡಕಟ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಸಂಬಂಧ ಕ್ರಮ ಕೈಗೊಂಡ ಪೊಲೀಸರು ಹಾಗೂ ಆಡಳಿತ ಮಂಡಳಿ, ಪ್ರಮುಖ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿದೆ.

ಮದಲು ಓರ್ವ ಆರೋಪಿಯ ಮನೆ ಧ್ವಂಸ ಮಾಡಲಾಗಿತ್ತು. ಬಳಿಕ ಇಡೀ ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ಮನೆಗಳ ಮೇಲೂ ಬುಲ್ಡೋಜರ್‌ಗಳನ್ನು ಬಳಸಲಾಗಿದೆ.

ಸಿಧಿ ಜಿಲ್ಲೆಯ ಮಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಸಂವೇದನಾಶೀಲ ಪ್ರಕರಣ ಬೆಳಕಿಗೆ ಬಂದಿದ್ದು, ಕಾಲೇಜಿನಲ್ಲಿ ಓದುತ್ತಿದ್ದ 7 ವಿದ್ಯಾರ್ಥಿನಿಯರನ್ನು ಸ್ಕಾಲರ್‌ಶಿಪ್ ಹೆಸರಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆರೋಪಿಗಳು ಧ್ವನಿ ಬದಲಾಯಿಸುವ ಆಯಪ್‌ ಮೂಲಕ ಕೃತ್ಯ ಎಸಗುತ್ತಿದ್ದರು. ಮಹಿಳಾ ಶಿಕ್ಷಕರಂತೆ ಬಿಂಬಿಸಿ ಹೆಣ್ಣು ಮಕ್ಕಳನ್ನು ವಂಚಿಸುತ್ತಿದ್ದರು.ವಿಷಯ ಬೆಳಕಿಗೆ ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡು ಪ್ರಮುಖ ಆರೋಪಿ ಬ್ರಿಜೇಶ್ ಪ್ರಜಾಪತಿ ಮತ್ತು ಆತನ 3 ಸಹಚರರನ್ನು ಬಂಧಿಸಿದ್ದರು.

ಈ ಮೂವರು ಆರೋಪಿಗಳು ಬ್ರಿಜೇಶ್ ಪ್ರಜಾಪತಿಯ ಸಂಬಂಧಿಕರಾಗಿದ್ದು, ಆರೋಪಿಯ ಎಲ್ಲಾ ಅಪರಾಧ ಚಟುವಟಿಕೆಗಳಲ್ಲಿ ಆರೋಪಿಗೆ ಬೆಂಬಲ ನೀಡುತ್ತಿದ್ದರು. ಪೊಲೀಸ್ ತಂಡ ಆರೋಪಿಯ ಮನೆಗೆ ತೆರಳಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದೆ.

Join Whatsapp
Exit mobile version