Home ಟಾಪ್ ಸುದ್ದಿಗಳು ಗೋಮೂತ್ರದಿಂದ ಕೋವಿಡ್ ಶಮನ ಸಾಧ್ಯವಿಲ್ಲವೆಂದವರ ಮೇಲೆ NSA ಕಾಯ್ದೆ| ತಕ್ಷಣ ಬಿಡುಗಡೆಗೊಳಿಸಬೇಕೆಂದು ಸುಪ್ರೀಮ್ ಆದೇಶ

ಗೋಮೂತ್ರದಿಂದ ಕೋವಿಡ್ ಶಮನ ಸಾಧ್ಯವಿಲ್ಲವೆಂದವರ ಮೇಲೆ NSA ಕಾಯ್ದೆ| ತಕ್ಷಣ ಬಿಡುಗಡೆಗೊಳಿಸಬೇಕೆಂದು ಸುಪ್ರೀಮ್ ಆದೇಶ

ಹೊಸದಿಲ್ಲಿ: ‘ಹಸುವಿನ ಸೆಗಣಿ ಅಥವಾ ಮೂತ್ರದಿಂದ ಕೋವಿಡ್ ಸೋಂಕನ್ನು ಗುಣಪಡಿಸಲು ಸಾಧ್ಯವಿಲ್ಲ’ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟ ಮಣಿಪುರ ಸಾಮಾಜಿಕ ಕಾರ್ಯಕರ್ತರಿಬ್ಬರನ್ನು ತಕ್ಷಣ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ.

ಎರಾಂಡ್ರೊ ಲೀ ಚೊಂಬಾ(40) ಮತ್ತು ಕಿಶೋರ್ ಚಂದ್ರ ವಾಂಗ್ ಖೇಮ್(41) ಎಂಬ ಇಬ್ಬರು ಸಾಮಾಜಿಕ ಕಾರ್ಯಕರ್ತರು ‘ಹಸುವಿನ ಸೆಗಣಿ ಅಥವಾ ಮೂತ್ರದಿಂದ ಕೋವಿಡ್ ಸೋಂಕನ್ನು ಗುಣಪಡಿಸಲು ಸಾಧ್ಯವಿಲ್ಲ’ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಮಣಿಪುರ ಬಿಜೆಪಿ ಉಪಾಧ್ಯಕ್ಷ ಉಷಮ್ ದೇಬನ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ.ಎಸ್.ಪ್ರೇಮಾನಂದ ಮೀಟೆ ಈ ಬಗ್ಗೆ ದೂರು ನೀಡಿದ್ದರು. ನಂತರ ಇಬ್ಬರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೇ 13 ರಂದು ಬಂಧಿಸಲಾಗಿತ್ತು.

‘ಈ ವ್ಯಕ್ತಿಗಳನ್ನು ಒಂದು ದಿನವೂ ಬಂಧನದಲ್ಲಿಡಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಲೀ ಚೊಂಬಾ ಮಣಿಪುರ ಮೂಲದ ಸ್ಥಳೀಯ ರಾಜಕೀಯ ಪಕ್ಷದ ಕನ್ವೀನರ್. 2018 ರಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ಕಿಶೋರ್ ಚಂದ್ರ ವಾಂಗ್ ಖೇಮ್ ಬಂಧಿತರಾಗಿದ್ದರು. ನಂತರ ಅವರನ್ನು 2019 ರ ಏಪ್ರಿಲ್‌ನಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

Join Whatsapp
Exit mobile version