Home ಟಾಪ್ ಸುದ್ದಿಗಳು ಬಡ್ತಿಗಾಗಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದ 55 ವರ್ಷದ ಪೊಲೀಸ್ ಸಿಬ್ಬಂದಿ

ಬಡ್ತಿಗಾಗಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದ 55 ವರ್ಷದ ಪೊಲೀಸ್ ಸಿಬ್ಬಂದಿ

ಕೋಲಾರ: 55 ವರ್ಷದ ವ್ಯಕ್ತಿಯೊಬ್ಬರು ಕೋಲಾರದಲ್ಲಿ ಉತ್ಸಾಹದಿಂದ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.
ಕೋಲಾರದ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕುರುಬರ ಪೇಟೆ ನಿವಾಸಿ 55 ವರ್ಷದ ಮಂಜುನಾಥ್ ಪರೀಕ್ಷೆ ಬರೆದಿದ್ದಾರೆ. ಮಂಜುನಾಥ್ ಸದ್ಯ ಬೆಂಗಳೂರು ಶಸಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

1993 ರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನಾಲ್ಕನೇ ತರಗತಿ ಪಾಸ್ ಆಗಿದ್ದರೆ ಕೆಲಸ ಸಿಗುತ್ತಿತ್ತು. 1996 ನಂತರ ಪೊಲೀಸ್ ಪೇದೆ ಕೆಲಸಕ್ಕೆ ಸೇರಲು ಹತ್ತನೇ ತರಗತಿ ಉತ್ತೀರ್ಣ ಕಡ್ಡಾಯ ಮಾಡಲಾಗಿದೆ.

ಹಾಗಾಗಿ ಮಂಜುನಾಥ್ ಎಷ್ಟು ವರ್ಷ ಸೇವೆ ಸಲ್ಲಿಸಿದರೂ ಕೂಡಾ ಅವರಿಗ ಬಡ್ತಿ ಸಿಕ್ಕಿಲ್ಲ. ಬಡ್ತಿ ಆಗಬೇಕಾದರೆ ಕಡ್ಡಾಯವಾಗಿ ಹತ್ತನೇ ತರಗತಿ ಉತ್ತೀರ್ಣರಾಗಬೇಕು. ಅದಕ್ಕಾಗಿ ಮಂಜುನಾಥ್ ಪರೀಕ್ಷೆ ಬರೆದಿದ್ದಾರೆ.

ಈ ಬಾರಿ ಹತ್ತನೇ ತರಗತಿ ಪಾಸ್ ಆದರೆ ಮಂಜುನಾಥ್ ಅವರಿಗೆ ಮುಖ್ಯ ಪೊಲೀಸ್ ಪೇದೆಯಾಗಿ ಬಡ್ತಿ ಸಿಗಲಿದೆ. ಮಂಜುನಾಥ್ ಪರೀಕ್ಷೆ ಬರೆಯಲು ಬಂದಾಗ ಅಲ್ಲಿದ್ದ ಕೆಲವರು ಇವರನ್ನು ನೋಡಿ ಆಶ್ಚರ್ಯ ಪಟ್ಟರು.

ಇವರು ಶಿಕ್ಷಕರೋ, ಇಲ್ಲಾ ಮುಖ್ಯ ಶಿಕ್ಷಕರೋ ಇರಬೇಕು ಎಂದುಕೊಂಡರು. ಆದರೆ ಅವರು ಒಬ್ಬ ವಿದ್ಯಾರ್ಥಿಯಂತೆ ಪರೀಕ್ಷೆ ಬರೆಯಲು ಕುಳಿತಾಗ ಅಲ್ಲಿದ್ದವರೂ ಆಶ್ಚರ್ಯಪಟ್ಟರು. ಮಂಜುನಾಥ್ ಅವರಿಗೆ ಮಕ್ಕಳು, ಮೊಮ್ಮಕ್ಕಳಿದ್ದಾರೆ.
ಇದೇ ರೀತಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆಯ 51 ವರ್ಷ ಪ್ರಾಯದ ಅಶೋಕ್ ಎಂಬುವವರು ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಕೂಡಾ ಹತ್ತನೇ ತರಗತಿ ಪರೀಕ್ಷೆ ಬರೆಯಲು ಬಂದಿದ್ದಾರೆ

Join Whatsapp
Exit mobile version