ಮಹಾರಾಷ್ಟ್ರ: ಅನರ್ಹತೆ ನೋಟಿಸ್ ನೀಡಿದ್ದ ಉಪಸ್ಪೀಕರ್’ಗೆ ಸುಪ್ರೀಂ ನೋಟಿಸ್

Prasthutha|

ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನಾ ಬಂಡಾಯ ಶಾಸಕರನ್ನು ಅನರ್ಹತೆಗೊಳಿಸುವ ಕುರಿತು ನೀಡಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ ಸ್ಪೀಕರ್, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.

- Advertisement -

ಗುವಾಹಟಿಯ ಹೋಟೆಲ್’ನಲ್ಲಿ ತಂಗಿರುವ ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಸರ್ಕಾರ ಅನರ್ಹತೆ ನೋಟಿಸ್ ನೀಡಿತ್ತು.

ಶಿವಸೇನೆ ನಾಯಕರಾದ ಅಜಯ್ ಚೌಧರಿ ಮತ್ತು ಸುನೀಲ್ ಪ್ರಭು ಅವರಿಗೆ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಐದು ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

Join Whatsapp
Exit mobile version