Home ಟಾಪ್ ಸುದ್ದಿಗಳು ಯೂಟ್ಯೂಬ್ ಚಾನೆಲ್ ಆರಂಭಿಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

ಯೂಟ್ಯೂಬ್ ಚಾನೆಲ್ ಆರಂಭಿಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರ ಭಾಷಣಗಳು ಈಗ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ‘Justice Nariman Official Channel’ ಲಭಿಸುತ್ತಿವೆ.

ನ್ಯಾ. ನಾರಿಮನ್‌ ಅವರ ಕನಸಿನ ಕೂಸಾದ ಈ ಯೂಟ್ಯೂಬ್‌ ಚಾನೆಲ್‌ನ ಪ್ರಸಾರ ಏಪ್ರಿಲ್ 16 ರಿಂದ ಆರಂಭವಾಗಿದೆ. ನ್ಯಾ. ನಾರಿಮನ್‌ ಮತ್ತು ಅವರ ತಂಡ ಚಾನೆಲ್ ನಿರ್ವಹಣೆ ಮಾಡುತ್ತಿದೆ.

ಕಾನೂನು, ಇತಿಹಾಸ, ಧರ್ಮ, ಸಂಗೀತ ಮತ್ತು ಇತರ ಹಲವು ವಿಷಯಗಳ ಕುರಿತು ನ್ಯಾ. ನಾರಿಮನ್‌ ಅವರು ನೀಡಿರುವ ಉಪನ್ಯಾಸಗಳ 48 ವೀಡಿಯೊಗಳು ಯೂಟ್ಯೂಬ್‌ ಚಾನೆಲ್‌ನಲ್ಲಿ ದೊರೆಯುತ್ತಿವೆ.

ಅವರ ಹೊಸ ಭಾಷಣಗಳು ಕೂಡ ಚಾನೆಲ್‌ನಲ್ಲಿ ಅಪ್‌ಲೋಡ್‌ ಆಗಲಿವೆ.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version