ಸುಳ್ಯ | ಯುವಕನ ಮೇಲೆ ಗುಂಡಿನ ದಾಳಿ: ಮೂವರ ಬಂಧನ

Prasthutha|

ಸುಳ್ಯ: ಇಲ್ಲಿನ ಜ್ಯೋತಿ ಸರ್ಕಲ್ ಬಳಿ ಕಾರಿನಲ್ಲಿ ಬಂದ ತಂಡವೊಂದು ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34), ಮನೋಜ್ (25) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಜೂನ್ 6ರ ರಾತ್ರಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡ ಸುಳ್ಯ ಜಯನಗರ ನಿವಾಸಿ ಮುಹಮ್ಮದ್ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿತ್ತು.

Join Whatsapp
Exit mobile version