Home ಟಾಪ್ ಸುದ್ದಿಗಳು ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ !

ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ !

ಮುಂಬೈ: ನಿರಂತರ ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯಿಂದ ರೂಪಾಯಿಯ ಮೌಲ್ಯ ಗುರುವಾರ ಅಮೆರಿಕನ್ ಡಾಲರ್ ಎದುರು 77.81ರಷ್ಟಕ್ಕೆ ಕುಸಿತವಾಗಿದೆ. ಬುಧವಾರ ರೂಪಾಯಿ ಮೌಲ್ಯ 77.68ರಷ್ಟು ಇದ್ದು, ದಿನದ ಅಂತರದ ದಾಖಲೆಯ ಕನಿಷ್ಠ ಮಟ್ಟ 13 ಪೈಸೆಯಷ್ಟು ಕುಸಿದಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 77.81ಕ್ಕೆ ತಲುಪಿದೆ.

ಮೇ 4 ರಂದು ನಡೆದ ನಿಗದಿತ ಸಭೆಯಲ್ಲಿ ಆರ್‌ಬಿಐ 40 ಬಿಪಿಎಸ್ ಹೆಚ್ಚಿಸಿದ್ದು, ಇದು ದರದ ಏರಿಕೆಗೆ ಕಾರಣವಾಗಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 123.43 ಡಾಲರ್ ಇದ್ದು, 0.12 ರಷ್ಟು ಕುಸಿದಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಯ ಎದುರು 30 ಷೇರುಗಳ ಸೆನ್ಸೆಕ್ಸ್ 10.05 ಪಾಯಿಂಟ್ ಅಥವಾ 0.02 ರಷ್ಟು ಹೆಚ್ಚಿ 54,902.54 ರಲ್ಲಿ ವಹಿವಾಟು ನಡೆಸುತ್ತಿದೆ. ಆದರೆ ನಿಫ್ಟಿ 5.65 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಮುನ್ನಡೆ ಸಾಧಿಸಿ ಶೇಕಡಾ 0.03 ತಲುಪಿದೆ.

Join Whatsapp
Exit mobile version