►ಸಮಸ್ಯೆಗಳ ಪಟ್ಟಿಯೊಂದಿಗೆ ಬರುತ್ತೇನೆಂದ ತ್ರಿಶೂಲ್ !
ಸುಳ್ಯ: ಆರ್ ಜೆ ತ್ರಿಶೂಲ್ ಗೌಡ ಅವರು ಸುಳ್ಯದ ರಸ್ತೆಯ ಬಗ್ಗೆ 3 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಗಮನ ಸೆಳೆದಿದ್ದರು.
ಸುಳ್ಯ ಮೂಲಕ ಹಾದು ಹೋಗುವ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಶ್ರೀರಾಮ ಪೇಟೆಯ ಜಂಕ್ಷನ್ ಬಳಿ ರಸ್ತೆ ಹದಗೆಟ್ಟಿತ್ತು. ಈ ವೀಡಿಯೋ ಮಾಡಿ ಜನರು ಸ್ವಚ್ಛ ನಗರ ಸುಳ್ಯ ವಾಟ್ಸಾಪ್ ಗ್ರೂಪ್ ಗೆ ಹಾಕಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ” ಕೀಬೋರ್ಡ್ ವಾರಿಯರ್ ” ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರ ಪಂಚಾಯತ್ ಅಧ್ಯಕ್ಷರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಆರ್ ಜೆ ತ್ರಿಶೂಲ್ ಅವರು ಸುಳ್ಯದ ನಗರ ಪಂಚಾಯತ್ ಅಧ್ಯಕ್ಷರಿಗೆ ಒಪನ್ ಚಾಲೆಂಜ್ ಹಾಕಿದ್ದು, ನಾನು ಸುಳ್ಯದ ಸಮಸ್ಯೆಗಳ ಪಟ್ಟಿಗಳ ಜೊತೆ ಬರ್ತೇನೆ, ನೀವು ಅವುಗಳಿಗೆ LIVE ಅಲ್ಲಿ ಉತ್ತರಿಸಿ.. ಕೀಬೋರ್ಡ್ ನಿಂದ ಸೀದಾ ಸ್ಕ್ರೀನ್ ಗೇ ಬರೋಣ ಎಂದು ಸವಾಲು ಹಾಕಿದ್ದಾರೆ.